ಮಂಗಳೂರು: ಹಿಟಾಚಿ ಹಾಗೂ ಟಿಪ್ಪರ್ ಮನೆ ಮೇಲೆ ಮಗುಚಿ ಬಿದ್ದ ಅವಘಡವೊಂದು ಬಂಟ್ವಾಳ ಸಮೀಪ ನಡೆದಿದೆ.
ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ವ್ಯಕ್ತಿಯೋರ್ವ ಗಾಯಗೊಂಡಿದ್ದಾರೆ. ಬಂಟ್ವಾಳ ಸಮೀಪದ ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.
ಕಾಮಗಾರಿ ಸಂಬಂಧ ಹಿಟಾಚಿ ವಾಹನವನ್ನು ಟಿಪ್ಪರ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ವಾಹನ ಚಾಲಕನ ನಿಯಙತ್ರಣ ತಪ್ಪಿ ನಾರಾಯಣ ಭಂಡಾರಿ ಎಂಬವರ ಮನೆ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಮನೆಗಷ್ಟೇ ಹಾನಿಯಾಗಿದ್ದಲ್ಲ, ಟಿಪ್ಪರ್‌ನಲ್ಲಿದ್ದ ಯುವಕನೂ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.