ಮಂಗಳೂರು: ಬಿಜೆಪಿಯ ಭದ್ರಕೋಟೆ ಬಂಟ್ವಾಳದಲ್ಲಿ ಕೇಸರಿ ಸೈನ್ಯ ಮತ್ತೊಮ್ಮೆ ವಿಜಯಪತಾಕೆ ಹಾರಿಸುವ ರಣೋತ್ಸಾಹದಲ್ಲಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಮತ್ತೊಮ್ಮೆ ಅಖಾಡಕ್ಕೆ ಧುಮುಕಿದ್ದು ಅವರು ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಬಂಟ್ವಾಳ ಇಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬಿಜೆಪಿಯ ನೆಲೆಯಾಗಿರುವ ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಬೆಂಬಲಿಗರು ಪ್ರವಾಹದ ಹರಿದಂತೆ ಭಾಸವಾದರು. ‘ಜನಸೇವಕನಿಗಾಗಿ ಜನಸಾಗರ’ ಎಂಬ ಘೋಷಣೆ ಮಾರ್ಧನಿಸಿತು.
ರಾಜೇಶ್ ನಾಯ್ಕ್ ಅವರು ಬಿಜೆಪಿ ಹುರಿಯಾಳಾಗಿ ಉಮೇದುವಾರಿಕೆ ಸಲ್ಲಿಸಲೆಂದು ಬಂಟ್ವಾಳ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತೆರಳಿದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಕರಾವಳಿಯ ಪ್ರಸಿದ್ದ ಪುಣ್ಯಕ್ಷೇತ್ರ ಪೊಳಲಿಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ಕಾರ್ಯಕರ್ತರ ಜೊತೆ ಪಾದಯಾತ್ರೆ ಆರಂಭಿಸಿದರು. ಮಧ್ಯಾಹ್ನದ ಹೊತ್ತಿಗೆ ಬಿ.ಸಿ.ರೋಡ್ ಕೈಕಂಬ ದ್ವಾರ ಬಳಿ ತಲುಪಿದ ರಾಜೇಶ್ ನಾಯ್ಜ್ ಅವರನ್ನು ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಬ್ರಹತ್ ಮೆರವಣಿಗೆ ಮೂಲಕ ತಾಲೂಕು ಕಚೇರಿಯತ್ತ ಕರೆದೊಯ್ದರು. ಈ ಮೆರವಣಿಗೆ ಸಾಗಿದ ಮಾರ್ಗ ಜನಪ್ರವಾಹ ಹರಿದಂತೆ ಭಾವಾಯಿತು.
ವಾರಾಂತ್ಯದ ದಿನವಾದ ಇಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನಾಮಪತ್ರ ಸಲ್ಲಿಸಿದರು. ಬಿಜೆಪಿ ಪಾಲಿಗೆ ಈ ಬಾರಿಯ ಚುನಾವಣೆಯೂ ಪ್ರತಿಷ್ಠೆಯ ಅಖಾಡವಾಗಿದ್ದರಿಂದ ಕಾರ್ಯಕರ್ತರ ಸಮೂಹ ಶಕ್ತಿ ಪ್ರದರ್ಶನ ಮೂಲಕ ಕರಾವಳಿಯಲ್ಲಿ ಸಂಚಲನ ಮೂಡಿಸಿದರು.
ಎಪ್ರಿಲ್ 15 ಶನಿವಾರ ಬೆಳಿಗ್ಗೆ 08:00ಕ್ಕೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಪಾದಯಾತ್ರೆಯ ಮೂಲಕ ಬಿ.ಸಿ ರೋಡ್ ಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದೇನೆ ತಾವೆಲ್ಲರೂ ಭಾಗವಹಿಸಬೇಕಾಗಿ ವಿನಂತಿ.#BJPYeBharavase#ನವಬಂಟ್ವಾಳpic.twitter.com/LcLy2a28DP
— Rajesh Naik U (Modi Ka Parivar) (@URajeshNaik) April 14, 2023
ಬಂಟ್ವಾಳದಲ್ಲಿ ಮತ್ತೆ ಗೆದ್ದು ಬೀರುವ ಸಂಬಂಧ ಕೇಸರಿ ಕಾರ್ಯಕರ್ತರು ಈಗಾಗಲೇ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಹುತೇಕ ಹಳ್ಳಿಗಳನ್ನೇ ಹೊಂದಿದ್ದರೂ ಕಳೆದೈದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಶಾಸಕ ರಾಜೇಶ್ ನಾಯ್ಕ್ ಅವರು ಈ ಬಾರಿ ಪುನರಾಯ್ಕೆ ಆಗಬೇಕೆಂದು ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ.