ಹೈದರಾಬಾದ್: ಜಿಹೆಚ್ಎಂಸಿ ಚುನಾವಣೆಯಲ್ಲಿ ಬಿರಿಯಾನಿ ರಾಜಕೀಯ ಕುರಿತು ನಾಯಕರ ನಡುವೆ ಕಾದಾಟ ಶುರುವಾದಂತಿದೆ. ರಾಜಕೀಯ ಟೀಕಾಸ್ತ್ರಗಳ ನಡುವೆ ಇದೀಗ ಬಿರಿಯಾನಿ ವಿಚಾರ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಏನಿದು ಬಿರಿಯಾನಿ ತಗಾದೆ ಅಂತೀರಾ.. ಜಿಹೆಚ್ಎಂಸಿ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಾದಾಟವಾಗಿದ್ದು ಬಿಜೆಪಿ ನಾಯಕರ ಕಾರ್ಯವೈಖರಿ ಬಗ್ಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕಟು ಟೀಕೆ ಮಾಡಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಓವೈಸಿ, ಬಿಜೆಪಿ ನಾಯಕರು ಹತಾಶೆಗೊಳಗಾಗಿದ್ದಾರೆ, ಅವರಿಗೆ ಏನೂ ಅರ್ಥವಾಗುತ್ತಿಲ್ಲ. ಅವರು ಬೀಫ್ ಬಿರಿಯಾನಿ ತಿನ್ನಲಿ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಗೋಶಮಹಲ್ ನ ಶಾಸಕ ರಾಜ ಸಿಂಗ್, ಓವೈಸಿಯ್ವರನ್ನು ಹಂದಿ ಮಾಂಸ ಬಿರಿಯಾನಿ ತಿನ್ನಲು ಆಹ್ವಾನಿಸಿದ್ದಾರೆ. ನಮ್ಮಲ್ಲಿ ಸ್ವಾದಿಷ್ಟ ಪೋರ್ಕ್ ಬಿರಿಯಾನಿ ತಯಾರಾಗಲಿದೆ. ಬಿರಿಯಾನಿ ತಿನ್ನುವ ಆಸೆ ಇದ್ದರೆ, ನಾನು ಕೊಡಿಸುತ್ತೇನೆ ಎಂದು ಓವೈಸಿಗೆ ರಾಜ ಸಿಂಗ್ ಆಹ್ವಾನಿಸಿದ್ದಾರೆ.
ಬಿರಿಯಾನಿ ಟೀಕೆಗಳು ಇದೀಗ ಕುತೂಹಲಕಾರಿ ಚರ್ಚೆಗಳಿಗೆ ಕಾರಣವಾಗಿವೆ