ತಮಿಳನಾಡು: ತಮಿಳು ನಟ ವಿಜಯಕಾಂತ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷ ಹರೆಯದ ಅವರು ಚಿಕಿತ್ಸೆ ಫಲಿಸದೇ ಇಂದು (ಗುರುವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
1979ರಲ್ಲಿ ಇನಿಕುಮ್ ಇಲಮೈ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ವಿಜಯ್‌ಕಾಂತ್. ಒಂದು ಕಾಲದಲ್ಲಿ ತಮಿಳು ಚಿತ್ರರಂಗವನ್ನು ಆಳಿದ ನಟರಲ್ಲಿ ಪ್ರಮುಖರಾಗಿದ್ದು ಕ್ಯಾಪ್ಟನ್ ಎಂದೇ ಗುರುತಾಗಿದ್ದರು.
1990 ರಲ್ಲಿ ವಿಜಯ್ ಕಾಂತ್, ಪ್ರೇಮಲತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಷಣ್ಮುಗ ಪಾಂಡಿಯನ್, ವಿಜಯ್ ಪ್ರಭಾಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಷಣ್ಮುಗ ಪಾಂಡಿಯನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
2005ರಲ್ಲಿ ವಿಜಯ್ ಕಾಂತ್ ಡಿಎಂಡಿಕೆ ಪಕ್ಷವನ್ನು ಸೇರುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಜಯ್ ಕಾಂತ್, ತಮಿಳುನಾಡು ರಾಜಕೀಯದಲ್ಲಿ ಪ್ರಭಾವಿ ಎನಿಸಿದ್ದರು.
ಕೆಲವು ಸಮಯದ ಹಿಂದೆ ಅನಾರೋಗ್ಯ ಕಾರಣದಿಂದಾಗಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ವಿಜಯ್ ಕಾಂತ್, ವೆಂಟಿಲೇಟರ್ ಸಹಾಯದಲ್ಲಿದ್ದರು. ಗುರುವಾರ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ನಟ ವಿಜಯ್ ಕಾಂತ್ ನಿಧಾನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.























































