ಬೆಂಗಳೂರು: ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಿರಾಸಾದಾಯಕವಾಗಿದೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸಲು ಧರ್ಮ-ಧರ್ಮಗಳ ನಡುವೆ ವಿಭಜಿಸುವ ದುಸ್ಸಾಹಸಕ್ಕೆ ಸಿದ್ದರಾಮಯ್ಯರವರು ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮ್ ಮಹಿಳೆಯರಿಗೆ ಸ್ವಯಂರಕ್ಷಣೆಗಾಗಿ ತರಬೇತಿ ಯೋಜನೆ ಘೋಷಿಸಿದ್ದಾರೆ. ಈ ಯೋಜನೆ ಹಿಂದೂ ಮಹಿಳೆಯರಿಗೆ ಯಾಕಿಲ್ಲ? ಮುಸ್ಲಿಂ ಬಡ ಮಹಿಳೆಯರ ಸರಳ ವಿವಾಹಕ್ಕೆ ರೂ. 50,000 ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ. ಹಿಂದೂಗಳಲ್ಲಿ ಬಡ ಮಹಿಳೆಯರು ಇಲ್ಲವೇ? ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ಕಲಿಕೆಗಾಗಿ ಪ್ರೋತ್ಸಾಹಧನ ರೂ. 20 ಲಕ್ಷ ಇದ್ದದ್ದನ್ನು ರೂ. 30 ಲಕ್ಷಕ್ಕೆ ಏರಿಸಲಾಗಿದೆ. ಯಾಕೆ ಈ ರೀತಿಯ ಯೋಜನೆಗಳು ಹಿಂದೂ ವಿದ್ಯಾರ್ಥಿಗಳಿಗಿಲ್ಲ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಿರಾಸಾದಾಯಕವಾಗಿದೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸಲು ಧರ್ಮ-ಧರ್ಮಗಳ ನಡುವೆ ವಿಭಜಿಸುವ ದುಸ್ಸಾಹಸಕ್ಕೆ ಸಿದ್ದರಾಮಯ್ಯರವರು ಕೈ ಹಾಕಿದ್ದಾರೆ.
ಮುಸ್ಲಿಮ್ ಮಹಿಳೆಯರಿಗೆ ಸ್ವಯಂರಕ್ಷಣೆಗಾಗಿ ತರಬೇತಿ ಯೋಜನೆ ಘೋಷಿಸಿದ್ದಾರೆ. ಈ ಯೋಜನೆ ಹಿಂದೂ ಮಹಿಳೆಯರಿಗೆ ಯಾಕಿಲ್ಲ?… pic.twitter.com/PZQm5EPa9u
— BJP Karnataka (@BJP4Karnataka) March 8, 2025