ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯನ್ನು ಕುಲಪತಿಯಾಗಿಸುವ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಜಯ ಸಿಕ್ಕಿದೆ.
ಈ ಮಸೂದೆಗೆ ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಸೂದೆ ಮೇಲೆ ಮತದಾನಕ್ಕೆ ಒತ್ತಾಯಿಸಿದರು. ಧ್ವನಿಮತಕ್ಕೆ ಹಾಕಿದ ಸಂದರ್ಭದಲ್ಲಿ ಮಸೂದೆ ಪರವಾಗಿ 26 ಮತಗಳು ಹಾಗೂ ವಿರುದ್ಧವಾಗಿ 25 ಮತಗಳು ಬಂದವು. ಈ ಮೂಲಕ ಒಂದು ಮತದ ಗೆಲುವಿನೊಂದಿಗೆ ವಿಧೇಯಕ ಅಂಗೀಕಾರವಾಯಿತು.
ಈ ಮೂಲಕ ಉಭಯ ಸದನಗಳಲ್ಲಿ ವಿವಿ ಮಸೂದೆ ಅಂಗೀಕಾರಗೊಂಡಿದೆ.