ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಪಾರ್ಕುಗಳು ಇನ್ನು ಮುಂದೆ ಇಡೀ ದಿನ ತೆರೆದಿರುತ್ತದೆ. ಮೊದಲು ಬೆಳಗ್ಗೆ 5ರಿಂದ ಬೆಳಗ್ಗೆ 10ರ ತನಕ ಪಾರ್ಕ್‍ಗಳು ತೆರೆದಿರುತ್ತಿತ್ತು. ಬಳಿಕ ಮಧ್ಯಾಹ್ನ 1:30ರಿಂದ ರಾತ್ರಿ 8ರ ತನಕ ಪಾರ್ಕ್‍ಗಳನ್ನು ತೆರೆಯಲು ಅವಕಾಶ ಇತ್ತು. ಇನ್ನು ಮುಂದೆ ಪ್ರತಿದಿನ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾಗರಿಕರ ಒತ್ತಾಯದ ಮೇರೆಗೆ ಪಾರ್ಕ್ ತೆರೆಯುವ ಸಮಯ ಹೆಚ್ಚಳ ಮಾಡಿದ್ದೇವೆ. ಎಂದಿದ್ದಾರೆ. ಆದರೆ, ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ತೋಟಗಾರಿಕೆ ವ್ಯಾಪ್ತಿಯಲ್ಲಿ ಇರುವ ಪಾರ್ಕ್‍ಗಳಿಗೆ ಈ ಅವಧಿ ವಿಸ್ತರಣೆ ಅನ್ವಯ ಆಗುವುದಿಲ್ಲ.
ಬೆಂಗಳೂರಿನಲ್ಲಿ 1200 ಕ್ಕೂ ಹೆಚ್ಚು ಉದ್ಯಾನವನಗಳು ಇದ್ದು, ಸಾರ್ವಜನಿಕರು ವಾಕಿಂಗ್, ಜಾಗಿಂಗ್, ವ್ಯಾಯಾಮ, ಸಾಮಾಜಿಕವಾಗಿ ಬಳಸುತ್ತಾರೆ. ಈ ನಿಟ್ಟಿನಲ್ಲಿ ಪಾರ್ಕ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.





















































