ತಿರುವನಂತಪುರಂ: ದೇವರ ನಾಡೆಂದೇ ಖ್ಯಾತವಾಗಿರುವ ಕೇರಳದಲ್ಲಿ ಬಿಜೆಪಿ ತನ್ನ ಖಾತೆಯನ್ನು ತೆರೆದಿದೆ. ಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ರ‍್ಜರಿ ಗೆಲುವು ಸಾಧಿಸುವ ಮೂಲಕ ಕೇಸರಿ ಪಾಳಯದ ಹಲವು ದಶಕಗಳ ಕನಸನ್ನು ನನಸಾಗಿಸಿದ್ದಾರೆ.
ತ್ರಿಶ್ಯೂರ್‌ನಲ್ಲಿ ಬಿಜೆಪಿ ಅಭ್ರ‍್ಥಿಯಾಗಿ ಕಣಕ್ಕಿಳಿದಿದ್ದ ನಟ ಸುರೇಶ್ ಗೋಪಿ ಅವರು ಜಯಗಳಿಸಿದ್ದಾರೆ. ಕಾಂಗ್ರೆಸ್ ಹುರಿಯಾಳು ಕೆ.ಮುರಳೀಧರನ್ ಹಾಗೂ ಸಿಪಿಐ ಅಭ್ರ‍್ಥಿ ವಿ.ಎಸ್. ಸುನೀಲ್ ಕುಮಾರ್ ಅವರ ಪ್ರಬಲ ಸ್ರ‍್ಧೆಯನ್ನು ಎದುರಿಸಿದ್ದರೂ ಸುರೇಶ್ ಗೋಪಿ ಅವರು ಬರೊಬ್ಬರಿ 69 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.






















































