ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ 40 ಸಾವಿರ ಕೋಟಿ ರೂಪಾಯಿ ಕೋವಿಡ್ ಹಗರಣ ನಡೆದಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಒಂದಿಲ್ಲೊಂದು ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ಯತ್ನಾಳ್ ಹೇಳಿಕೆ ಮುಂದಿಟ್ಟು ಕಾಂಗ್ರೆಸ್ ಇದೀಗ ತರಾಟೆಗೆ ತೆಗೆದುಕೊಳ್ಳುತ್ತಿದೆ.
40 ಸಾವಿರ ಕೋಟಿಯ ಕೋವಿಡ್ ಹಗರಣ ಬಗ್ಗೆ ತನಿಖೆ ನಡೆಸಿ ಎಂದು ಪ್ರಧಾನಿ ಮೋದಿ ಅವರನ್ನೇ ಆಗ್ರಹಿಸುವ ಮೂಲಕ ಬಿಜೆಪಿ ವರಿಷ್ಠರನ್ನು ಮುಜುಗರಕ್ಕೆ ಸಿಲುಕಿಸುವ ಪಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ “ನಾ ಖವುಂಗಾ ನಾ ಖಾನೆದುಂಗ” ಎಂದು ಭಾಷಣ ಬಿಗಿಯುವ ನರೇಂದ್ರ ಮೋದಿ ಅವರು “ಕೈ ಕಟ್ ಬಾಯ್ ಮುಚ್” ಎನ್ನುವಂತೆ ಸುಮ್ಮನಿರುವುದೇಕೆ? ಎಂದು ಪ್ರಶ್ನಿಸಿದೆ.
ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ "ನಾ ಖವುಂಗಾ ನಾ ಖಾನೆದುಂಗ" ಎಂದು ಭಾಷಣ ಬಿಗಿಯುವ @narendramodi ಅವರು "ಕೈ ಕಟ್ ಬಾಯ್ ಮುಚ್" ಎನ್ನುವಂತೆ ಸುಮ್ಮನಿರುವುದೇಕೆ?
ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು?
ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ನಿಷ್ಠುರತೆ ಹೊಂದಿದ್ದರೆ…
— Karnataka Congress (@INCKarnataka) December 27, 2023
ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು? ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ನಿಷ್ಠುರತೆ ಹೊಂದಿದ್ದರೆ ಮೋದಿಯವರು ತಮ್ಮ ಪಕ್ಷದವರ ಮೇಲೆ ತನಿಖೆ ನಡೆಸಲಿ ಎಂದು ಕಾಂಗ್ರೆಸ್ ಹೇಳಿದೆ.
◆45 ರೂಪಾಯಿಯ ಒಂದು ಮಾಸ್ಕಿಗೆ 480 ರೂಪಾಯಿ ಬಿಲ್!
◆ಒಂದು ದಿನಕ್ಕೆ ಒಂದು ಬೆಡ್ ಗೆ 20 ಸಾವಿರ ಬಾಡಿಗೆ!
◆ದಿನಕ್ಕೆ 20 ಸಾವಿರ ಬಾಡಿಗೆಯ 10 ಸಾವಿರ ಹಾಸಿಗೆಗಳು!
◆ಆ 10 ಸಾವಿರ ಬಾಡಿಗೆ ಹಾಸಿಗೆಗಳ ಕ್ವರಂಟೈನ್ ಕೇಂದ್ರ ಬಳಕೆಯೇ ಆಗಿಲ್ಲ!
ಕ್ವರಂಟೈನ್ ಸೆಂಟರ್ ಹೆಸರಲ್ಲಿ, ಮಾಸ್ಕುಗಳಲ್ಲಿ ಲೂಟಿ ಹೊಡೆದ ಹಣಕ್ಕೆ ಎಷ್ಟು ಸೊನ್ನೆ…
— Karnataka Congress (@INCKarnataka) December 27, 2023






















































