ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡ್ರಗ್ಸ್ ದಂಧೆಗೆ ಸಿದ್ಧತೆ ಮಾಡಿರುವ ಮಾಫಿಯಾವನ್ನು ಪೊಲೀಸರು ಬೇಧಿಸಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಕ್ರಮ ಕೈಗೊಂಡಿರುವ ಪೊಲೀಸರು ನೆಲಮಂಗಲ ಬಳಿ ಮನೆಯೊಂದರ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗಂಗೊಂಡನಹಳ್ಳಿ ಅನಿಲ್, ಅಂದ್ರಹಳ್ಳಿ ಕಾರ್ತಿಕ್, ನವೀನ್ ಮತ್ತು ದೊಂಬರಹಳ್ಳಿ ಮಂಜುನಾಥ್ ಎಂದು ಗುರುತಿಸಲಾಗಿದೆ. 2 ಕೆಜಿ ಗಾಂಜಾ, ಎರಡು ಬೈಕ್ ಹಾಗೂ ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಡಿ.31ರಂದು ವಿವಿಧೆಡೆ ಡ್ರಗ್ಸ್ ಸರಬರಾಜು ಮಾಡಲು ಅಪಾರ ಪ್ರಮಾಣದ ಆರ್ಡರ್ ಪಡೆದಿದ್ದರು ಎಂಬ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.






















































