ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ದುರಂತ ಹೆಲಿಕಾಪ್ಟರ್ ಅಪಘಾತದಲ್ಲಿ ನಾಲ್ವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯನ್ ಆರ್ಮಿ MRH-90 ತೈಪಾನ್ ಹೆಲಿಕಾಪ್ಟರ್ ಅಭ್ಯಾಸ ತಾಲಿಸ್ಮನ್ ಸೇಬರ್ 2023 ರ ಭಾಗವಾಗಿ ರಾತ್ರಿ-ಸಮಯದ ತರಬೇತಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ, ಇದು ಆಸ್ಟ್ರೇಲಿಯಾ -ಅಮೇರಿಕ ಜಂಟಿ ಮಿಲಿಟರಿ ಸಮರಾಭ್ಯಾಸವಾಗಿದ್ದು ಪೂರ್ವಭಾವಿ ಕಸರತ್ತಿನ ವೇಳೆ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.
ಕಾರ್ಯಾಚರಣೆಯ ವೇಳೆ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಹೆಲಿಕಾಪ್ಟರ್’ನಲ್ಲಿ ನಾಲ್ವರು ಸಿಬ್ಬಂದಿ ಇದ್ದರು ಎನ್ನಲಾಗಿದ್ದು ಮಿಲಿಟರಿ ಪಡೆಗಳು ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ಮೂಲಗು ತಿಳಿಸಿವೆ.






















































