ದೆಹಲಿ: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಒಟ್ಟು 128 ಮಂದಿ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಿದೆ. ನಾಲ್ವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ, 107 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಪದ್ಮ ವಿಭೂಷಣ ಪುರಸ್ಕೃತರು:
- ಪ್ರಭಾ ಅತ್ರೆ (ಕಲೆ),
- ರಾಧೇಶ್ಯಾಮ್ ಖೆಮ್ಕಾ (ಸಾಹಿತ್ಯ ಮತ್ತು ಶಿಕ್ಷಣ, ಮರಣೋತ್ತರ),
- ಜನರಲ್ ಬಿಪಿನ್ ರಾವತ್ (ನಾಗರಿಕ ಸೇವೆ, ಮರಣೋತ್ತರ),
- ಕಲ್ಯಾಣ್ಸಿಂಗ್ (ರಾಜಕಾರಣ, ಮರಣೋತ್ತರ).
ಪದ್ಮಶ್ರೀ ಪುರಸ್ಕೃತ ಕರ್ನಾಟಕದ ಸಾಧಕರು:
- ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಎಂಜಿನಿಯರಿಂಗ್),
- ಎಚ್.ಆರ್.ಕೇಶವಮೂರ್ತಿ (ಕಲೆ),
- ಅಬ್ದುಲ್ ಖಾದರ್ ನಾದಕಟ್ಟಿನ್ (ತಳಮಟ್ಟದ ಅನ್ವೇಷಕರು),
- ಅಮೈ ಮಹಾಲಿಂಗ ನಾಯ್ಕ (ಕೃಷಿ),
- ಸಿದ್ದಲಿಂಗಯ್ಯ (ಸಾಹಿತ್ಯ ಮತ್ತು ಶಿಕ್ಷಣ).