ನ್ಯೂಯಾರ್ಕ್: ಜಗತ್ತಿನಾದ್ಯಂತ ಕೋವಿಡ್-19 ವೈರಾಣು ಅನೇಕ ಜೀವಗಳನ್ನು ಬಲಿತೆಗೆದುಕೊಂಡಿದ್ದು, ಲಸಿಕೆ ಅಭಿಯಾನ ನಂತರ ಪರಿಸ್ಥಿತಿ ಚೇತರಿಸಿಕೊಂಡಿದೆ ಎಂದೇ ಹೇಳಲಾಗುತ್ತಿತ್ತು. ಅದಾಗಲೇ ರೂಪಾಂತರಿ ವೈರಸ್ ಡೆಲ್ಟಾ ಹಾಗೂ ಓಮಿಕ್ರಾನ್ ಸೋಂಕು ಹಾವಳಿಯು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಒಮಿಕ್ರಾನ್ ಜೊತೆಯಲ್ಲೇ ಮತ್ತೊಂದು ರೂಪಾಂತರಿ ಡೆಲ್ಮಿಕ್ರಾನ್(Delmicron) ಕೂಡಾ ಆತಂಕದ ಅಲೆ ಎಬ್ಬಿಸಿದೆ.
ಏನಿದು ‘ಡೆಲ್ಮಿಕ್ರಾನ್’?
ಕೋವಿಡ್19 ವೈರಸ್ ನಂತರ ಹಲವು ರೂಪಾಂತರಿಗಳು ತ್ಲಣ ಸೃಷ್ಟಿಸಿದ್ದು ಅದರ ರೂಪಾಂತರಿಯಾಗಿ ‘ಡೆಲ್ಮಿಕ್ರಾನ್’ (Delmicron) ಆತಂಕ ಸೃಷ್ಟಿಸಿದೆ. ಈ ರೂಪಾಂತರಿ ವೈರಸ್ ಪ್ರಸ್ತುತ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಡೆಲ್ಟಾ ಮತ್ತು ಒಮಿಕ್ರಾನನ್ನು ಇದು ಸಂಯೋಜಿಸಿದಂತಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೋನಾ, ಒಮಿಕ್ರಾನ್ ಸೋಂಕಿನ ಲಕ್ಷಣಗಳೇ ಈ ಸೋಂಕಿಗೊಳಗಾದವರಲ್ಲೂ ಕಂಡುಬರುತ್ತದೆ ಎನ್ನಲಾಗಿದೆ. ಈ ಬಗ್ಗೆ ಆತಂಕ ಒಳಪಡಬೇಕಿಲ್ಲ. ಆದರೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಿದ್ದಾರೆ.