ಭೋಜರಾಜ್ ಜೊತೆ ಕೈ ಜೋಡಿಸಿದ ಒರಿಜಿನಲ್ ಡಾಕ್ಟರ್.. ದರ್ಬಾರ್ ಸಿನೆಮಾಸ್ ನಿರ್ಮಾಣದ ಪ್ರಥಮ ತುಳು ಚಿತ್ರ..
‘ಭೋಜರಾಜ್ mbbs’ ಚಿತ್ರ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ತುಳುವರ ಮೆಚ್ಚಿನ ಹಾಸ್ಯ ನಟ ಭೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುವ ಈ ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮೂರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಳು ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದೆ.
ಮೊದಲ ಬಾರಿಗೆ ತುಳು ಚಿತ್ರ ರಂಗದ ಮತ್ತು ತುಳು ರಂಗಭೂಮಿಯ ದಿಗ್ಗಜರುಗಳೇನಿಸಿದ ದೇವದಾಸ್ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ಕೋಸ್ಟಲ್ ವುಡ್ ಪಾಲಿಗೆ ವಿಶೇಷ ವಾಗಿದೆ.
ಇದೀಗ ಚಿತ್ರ ತಂಡದಿಂದ ಬಂದ ಸುದ್ದಿ ಭೋಜರಾಜ್ mbbsನಲ್ಲಿ ಮಂಗಳೂರಿನ ಬೋಂದೆಲ್ ನಲ್ಲಿ ಕ್ಲಿನಿಕ್ ಹೊಂದಿರುವ ಹೆಸರಾಂತ ವೈದ್ಯರಾದ ಡಾ. ಸತೀಶ್ ಕಲಿಮಾರ್ ಈ ಚಿತ್ರದಲ್ಲಿ ಬಣ್ಣ ಹಚ್ಚಿಕೊಳ್ಳುವ ಮೂಲಕ. ವಿಶೇಷ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇದೇ ವರ್ಷದಲ್ಲಿ ತೆರೆಗೆ ತರುವ ತರಾತುರಿಯಲ್ಲಿದೆ ಚಿತ್ರ ತಂಡ. ಪ್ರಭಾ ಎನ್ ಸುವರ್ಣ ಮತ್ತು ನಾರಾಯಣ ಪಿ ಸುವರ್ಣ ಮುಂಬೈ ಅರ್ಪಿಸುವ , ನವೀನ್ ರೈ ಕೆರೆಬೈಲ್ ಸಹಕಾರದೊಂದಿಗೆ, ದರ್ಬಾರ್ ಬ್ಯಾನರಿನಲ್ಲಿ, ರಫೀಕ್ ದರ್ಬಾರ್ ನಿರ್ಮಿಸುವ, ಈ ಚಿತ್ರಕ್ಕೆ ಪರ್ವೇಜ್ ಬೆಳ್ಳಾರೆ ಸಹ ನಿರ್ಮಾಪಕರಾಗಿದ್ದಾರೆ. ಕತೆ, ಚಿತ್ರಕಥೆ, ಸಂಭಾಶನೆ, ನಿರ್ದೇಶನ ಇಸ್ಮಾಯಿಲ್ ಮೂಡುಶೆಡ್ಡೆ ಅವರದ್ದು.
ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್,ಸಾಯಿಕೃಷ್ಣ, ಶೀತಲ್ ನಾಯಕ್, ನವ್ಯ ಪೂಜಾರಿ, ಉಮೇಶ್ ಮಿಜಾರ್, ರವಿ ರಾಮಕುಂಜ, ಪುಷ್ಪರಾಜ್ ಬೋಲ್ಲಾ ರ್,ಸುಜಾತ ಶಕ್ತಿನಗರ,ಪ್ರಾಣ್ ಶೆಟ್ಟಿ,ಗಿರೀಶ್ ಹೆಗ್ಡೆ,ಶರಣ್ ರಾಜ್ ಕಾಸರಗೋಡು, ರೋನ್ಸ್ ಲಂಡನ್ ಮೊದಲಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ಮೊದಲ ಬಾರಿಗೆ ದೇವದಾಸ್ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.