ಮೈಸೂರು: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರ 29 ನೇ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರು ಅರಮನೆ ತೋಟಗಾರಿಕೆ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿರುವ 7 ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮೇಗೌಡ, ಮಹದೇವ, ಚಿಕ್ಕಮಲ್ಲಯ್ಯ, ಸಿದ್ದಯ್ಯ, ರಾಜಣ್ಣ, ಗೌಡಯ್ಯ, ಬಸವಯ್ಯರವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಅಮರನಾಥ್ ರಾಜೇ ಅರಸ್ ಮಾತನಾಡಿ ಇಂದು ಮಹಾರಾಜ ಯದುವೀರ್ ವರ್ದಂತಿ ಹಿನ್ನಲೆ ಅವರ ಹುಟ್ಟು ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಕೊರೋನಾ ಹಿನ್ನಲೆ ಅದ್ದೂರಿಯಾಗಿ ಆಚರಿಸದೇ ಈ ಬಾರಿ ಸರಳವಾಗಿ ಮೈಸೂರು ಅರಮನೆ ತೋಟಗಾರಿಕೆ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿರುವ 7 ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಾಕರ ಸಂಘದ ಅಧ್ಯಕ್ಷ ಕೆ.ದೀಪಕ್, ಕೆ.ಜೆ.ಅನಂತರಾಜ ಅರಸ್, ನಂದೀಶ್ ಜಿ ಅರಸ್, ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.