ಜಮ್ಮು: ಉಗ್ರರ ಪೋಷಕ ದೇಶಬ್ ಪಾಕಿಸ್ತಾನ ಮತ್ತೆ ತನ್ನ ಕಿತಾಪತಿ ಮಿಂದುವರಿಸಿದೆ. ನಾಲ್ಕು ರಾಜ್ಯಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ಡ್ರೋನ್ ದಾಳಿಗೆ ಯತ್ನಿಸಿರುವ ಪಾಕಿಸ್ತಾನಕ್ಕೆ ಭಾರತದ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.
ಜಮ್ಮು-ಕಶ್ಮೀರ, ರಾಜಸ್ತಾನ, ಪಂಜಾಬ್ ರಾಜ್ಯಗಳ ಹಲವು ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ಕೈಗೊಂಡಿದೆ. ಆದರೆ ಭಾರತದ ಸೇನೆ ಪಾಕಿಸ್ತಾನದ ನೂರಾರು ಡ್ರೋನ್ ಗಳನ್ನೂ ಹೊಡೆದುರುಳಿಸಿದೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಆವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
चार पाकिस्तानी हेलीकाप्टर
भारत क़े भुज में बरसा रहे थे बम…भारत ने
एक ही हमले में चारों को किया स्वाहा 🔥भारतीय सेना जिंदाबाद #IndianArmy✊ pic.twitter.com/0IW9IbUAk9
— Deepak Sharma (@SonOfBharat7) May 9, 2025
ಬಾರಾಮುಲ್ಲಾದಿಂದ ಭುಜ್ವರೆಗಿನ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ 26 ಸ್ಥಳಗಳಲ್ಲಿ ಶಂಕಿತ ಶಸ್ತ್ರಸಜ್ಜಿತ ಡ್ರೋನ್ಗಳು ಪತ್ತೆಯಾಗಿವೆ. ಮಿಲಿಟರಿ ಸ್ಥಳಗಳನ್ನು ಮಾತ್ರವಲ್ಲದೆ ನಾಗರೀಕರನ್ನೂ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸೇನೆ ಹೇಳಿಕೆಯೊಂದು ತಿಳಿಸಿದೆ.
ಇದೇ ವೇಳೆ, ಪಂಜಾಬಿನ ಫಿರೋಜ್ ಪುರದಲ್ಲಿ ಮನೆಯೊಂದರ ಮೇಲೆ ಪಾಕಿಸ್ತಾನದ ಡ್ರೋನ್ ಅವಶೇಷ ಬಿದ್ದಿದ್ದು, ಆ ಮನೆಗೆ ಹಾನಿಯಾಗಿದ್ದಲ್ಲದೆ ಮೂವರು ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರ ಪಂಜಾಬ್, ರಾಜಸ್ಥಾನ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಭಾರತ ತನ್ನ S-400 ವಾಯು ರಕ್ಷಣಾ ವ್ಯವಸ್ಥೆಯಿಂದ ತಡೆದಿದ್ದು, ಪಾಕಿಸ್ತಾನದ ಶಾಸ್ತ್ರಗಳನ್ನು ನಾಶ ಮಾಡಿದೆ.
ಇನ್ನೊಂದೆಡೆ, ಗುಜರಾತಿನ ಮೇಲೂ ಕಣ್ಣಿಟ್ಟಿರುವ ಪಾಕಿಸ್ತಾನ ಶುಕ್ರವಾರ ರಾತ್ರಿ ಡ್ರೋನ್ ದಾಳಿಗೆ ಯತ್ನಿಸಿದೆ. ಆದರೆ ಪಾಕ್ ಈ ಪ್ರಯತ್ನದಲ್ಲಿ ವಿಫಲವಾಗಿದೆ ಎನ್ನಲಾಗಿದೆ.