ಹೈದರಾಬಾದ್,ನ.26: ಉನ್ನತ ವ್ಯಾಸಂಗ ಮಾಡಿ, ಸೂಕ್ತವಾದ ವಿದ್ಯಾಭ್ಯಾಸ ಹೊಂದಿದವರಿಗೆ ಇಂದು ಸರಿಯಾದ ಉದ್ಯೋಗ ಅವಕಾಶಗಳು ಸಿಗುವುದು ಕಷ್ಟವಾಗಿದೆ.. ಹೀಗಿರುವಾಗ ಇನ್ನೂ 7ನೇ ತರಗತಿ ಓದುತ್ತಿರುವಾಗಲೇ ಹೆಸರಾಂತ ಕಂಪನೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ ಹೈದರಾಬಾದ್ ಮೂಲದ ಪೋರ.. ಹೌದು.. ಹೈದರಾಬಾದಿನ ಶ್ರೀ ಚೈತನ್ಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ, ಮಾಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕವಾಗಿದ್ದಾನೆ.
ಚಿಕ್ಕ ವಯಸ್ಸಿನಲ್ಲೇ ಗೂಗಲ್ ಕಂಪನಿಗೆ ಕೆಲಸಕ್ಕೆ ಸೇರಿದ್ದ ತನ್ಮಯ್ ಬಕ್ಷಿಯನ್ನೇ ಆದರ್ಶವಾಗಿಟ್ಟುಕೊಂಡಿದ್ದ ಸಿದ್ಧಾರ್ಥ್ ಗೆ ಈ ಕೆಲಸ ಪಡೆಯಲು ಅವರ ತಂದೆ ಸಾಕಷ್ಟು ಸಹಾಯ ಮಾಡಿದ್ದಾರಂತೆ. ಚಿಕ್ಕವನಾಗಿದ್ದಾಗಲೇ ಸಿದ್ಧಾರ್ಥ್ ಗೆ ತಂದೆಯೇ ಕೋಡಿಂಗ್ ಮಾಡಲು ಹೇಳಿಕೊಡುತ್ತಿದ್ದರಂತೆ..ಇವತ್ತು ತಾನು ಮಾಡುವ ಸಾಧನೆಗೆ ತನ್ನ ತಂದೆಯೇ ಕಾರಣ ಎಂಬುದಾಗಿ ಸಿದ್ದಾರ್ಥ್ ಹೇಳಿಕೊಂಡಿದ್ದಾನೆ.