ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ್ನಲ್ಲಿ 6.5 ಕಿ.ಮೀ ಉದ್ದದ ʼಝಡ್-ಮೋರ್ಹ್ ಸುರಂಗ ಮಾರ್ಗʼವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜಿತೇಂದ್ರ ಸಿಂಗ್, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು.
#WATCH | Jammu & Kashmir: Prime Minister Narendra Modi inaugurates the Z-Morh tunnel in Sonamarg today.
CM Omar Abdullah and LG Manoj Sinha, Union Minister Nitin Gadkari are also present.
(Source: DD/ANI)#KashmirOnTheRise pic.twitter.com/GF7rwZaVn1
— ANI (@ANI) January 13, 2025
ಜಮ್ಮು ಮತ್ತು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಈ ಸುರಂಗ ಮಾರ್ಗವು ಹಿಮಕುಸಿತ, ಭೂಕುಸಿತದಂತಹ ಎಲ್ಲ ರೀತಿಯ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿಯೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.