ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದಿದೆ. ಇದೀಗ ರಾಜಕೀಯ ನಾಯಕರು ಗೆಲುವಿನ ಸಂಭ್ರಮದಲ್ಲಿದ್ದಾರೆ. ಇನ್ನೂ ಕೆಲವರು ಸೋಲಿನ ಬಗ್ಗೆ ಆತ್ಮಾವಲೋಕನದಲ್ಲಿ ತೊಡಗಿದ್ದಾರೆ.
ಇತ್ತ, ಕರ್ನಾಟಕದಲ್ಲಿ ಪರಿಪೂರ್ಣ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದ್ದು, 28 ಕ್ಷೇತ್ರಗಳ ಪೈಕಿ 17 ಕಡೆ ಬಿಜೆಪಿ ಗೆದ್ದಿದೆ, 9 ಸ್ಥಾನಗಳನ್ನು ಕಾಂಗ್ರೆಸ್ ಪಡೆದರೆ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಜೆಡಿಎಸ್ ಪತನವಾಗಿರುವುದೇ ಫಲಿತಾಂಶದ ಅಚ್ಚರಿ.
ಈ ನಡುವೆ, ಈ ಬಾರಿಯೂ ಕರ್ನಾಟಕದಲ್ಲಿ 2004ರ ಫಲಿತಾಂಶವೇ ಮರುಕಳಿಸಿರುವುದು ಅಚ್ಚರಿಯ ಸಂಗತಿ. 2004ರಲ್ಲೂ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಹಂಚಿದ್ದವು.






















































