ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೆಂಪು, ಹಳದಿ, ಹಸಿರು ಹಾಗೂ ಬಿಳಿ ಬಣ್ಣದ ಪಟ್ಟಿಯನ್ನು ಕೈಗೆ ಕಟ್ಟಿಕೊಂಡು ಬರಲು ಹೇಳಿದ್ದು, ಈ ಬಣ್ಣದ ಪಟ್ಟಿಗಳ ಮೂಲಕ ಮಕ್ಕಳನ್ನು ಜಾತಿಯ ಆಧಾರದ ಮೇಲೆ ಬೇರ್ಪಡಿಸಿ ಕೂರಿಸುವ ಮೂಲಕ ಮಕ್ಕಳ ಮನಸ್ಸಲ್ಲಿ ಜಾತಿಯ ವಿಷ ಬೀಜ ಬಿತ್ತಿದ್ದು.ಈ ಕುರಿತು ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಕೋಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು “ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್ ಜಾತಿಯ ಮಕ್ಕಳನ್ನು ಪ್ಲಸ್” ಎಂದು ಆಡಿದ ಮಾತು, ಇದೀಗ ದೇಶದಾದ್ಯಂತ ಚರ್ಚೆ ಮೂಡಿಸಿದ್ದು, ಟೀಕೆಗೆ ಗುರಿಯಾಗಿದೆ.
- ಮಕ್ಕಳು ಕೈ ಗೆ ಕೆಂಪು, ಹಳದಿ, ಹಸಿರು ಹಾಗೂ ಬಿಳಿ ಬಣ್ಣದ ಪಟ್ಟಿಗಳನ್ನು ಬೇರೆ ಬೇರೆ ಜಾತಿಯ ಸಂಕೇತವನ್ನು ಸೂಚಿಸುತ್ತಿದ್ದು, ಈ ಮೂಲಕ ಅವರು ಯಾವ ಜಾತಿಯವರು ಎಂಬುದು ಶಿಕ್ಷಕರಿಗೆ ಖಚಿತ ಪಡಿಸಿಕೊಳ್ಳುವ ಮೂಲಕ ಅವರನ್ನು ಬೇರ್ಪಡಿಸುತ್ತಾರೆ ಎನ್ನಲಾಗಿದೆ. ಈ ರೀತಿಯಾಗಿ ದಲಿತ ವಿದ್ಯಾರ್ಥಿಗಳನ್ನು ಮೇಲ್ವರ್ಗದ ವಿದ್ಯಾರ್ಥಿಗಳಿಂದ ಬೇರ್ಪಡಿಸಿ ಕೂರಿಸುವ ಹಾಗೂ ತಾರತಮ್ಯದ ಶಿಕ್ಷಣ ನೀಡುತ್ತಿರುವ ದೇಶಾದ್ಯಂತ ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ದಲಿತ ಪರ ಸಾಮಾಜಿಕ ಹೋರಾಟಗಾರ ಕದಿರ್ ಎಂಬವರು, “ಇಂತಹ ನೀಚ ಪದ್ಧತಿಯನ್ನು ಮಧುರೈ ಮಾತ್ರವಲ್ಲದೆ ತಮಿಳುನಾಡಿನ ನಾನಾ ಭಾಗಗಳ ಶಾಲೆಗಳಲ್ಲಿ ಈಗಲೂ ಮುಂದುವರಿಯುತ್ತಿದ್ದು, ಅಂಗನವಾಡಿಯಿಂದಲೇ ಈ ಪದ್ದತಿಯ್ನನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ದಲಿತ ಮಕ್ಕಳು ನೀರು ಕುಡಿಯುವುದಕ್ಕಾಗಿ ಅವರಿಗಾಗಿ ಪ್ರತ್ಯೇಕ ಬಾಟಲ್ಗಳನ್ನು ತರಬೇಕು ಎಂದು ಶಾಲೆಗಳಲ್ಲಿ ತಾಕೀತು ಮಾಡಲಾಗುತ್ತಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ದಲಿತ ವಿದ್ಯಾರ್ಥಿಗಳಿಗೆ ತಾರತಮ್ಯವೆಸಗಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.ದೇಶ ಎಷ್ಟೇ ಬದಲಾದರೂ, ಪರಿವರ್ತನೆಯಾದರು ಜಾತಿ ಹೆಸರಿನಲ್ಲಿ ಸಮಾಜದಲ್ಲಿ ಅನ್ಯಾಯ ಎಸಗುವ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿಯುತ್ತಿದೆ.