ಬೆಳಗಾವಿ: ಜಲಜೀವನ ಮಿಷನ್ ಯೋಜನೆಗೆ ಶಂಕುಸ್ಥಾಪನೆ, ನವೀಕೃತ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವಿಕೆ,ಲೊಂಡ-ಬೆಳಗಾವಿ-ಘಟಪ್ರಭಾ ಮಾರ್ಗದ ಡಬ್ಲಿಂಗ್ ಕಾಮಗಾರಿ ಸೇರಿದಂತೆ 2240 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಗಾವಿಯ ಹೊರವಲಯದ ಮಾಲಿನಿ ಸಿಟಿ ಮೈದಾನಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ,
ನರೇಂದ್ರಸಿಂಗ್ ತೋಮರ್,ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ,ಬಿ.ಸಿ.ಪಾಟೀಲ್,ಶಶಿಕಲಾ ಜೊಲ್ಲೆ, ಸಂಸದರಾದ ಮಂಗಳಾ ಸುರೇಶ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ,ಈರಣ್ಣ ಕಡಾಡಿ,ಶಾಸಕರಾದ ಮಹೇಶ ಕುಮಠಳ್ಳಿ,ಪಿ.ರಾಜೀವ,ದುರ್ಯೋಧನ ಐಹೊಳೆ,ಬಾಲಚಂದ್ರ ಜಾರಕಿಹೊಳಿ,ರಮೇಶ ಜಾರಕಿಹೊಳಿ,ಅಭಯ್ ಪಾಟೀಲ,ಮಹದೇವಪ್ಪ ಯಾದವಾಡ,ಶ್ರೀಮಂತ್ ಪಾಟೀಲ, ಅನಿಲ ಬೆನಕೆ,ಮಹಾಂತೇಶ ದೊಡ್ಡಗೌಡರ್,ಲಕ್ಷ್ಮಣ ಸವದಿ,ಹನುಮಂತ ನಿರಾಣಿ,ಡಾ.ಸಾಬಣ್ಣ ತಳವಾರ, ಸೇರಿದಂತೆ ಇನ್ನೀತರರು ಇದ್ದರು.