ಬೆಂಗಳೂರು: ಪೇಮೆಂಟ್ ಗೇಟ್ ವೇ ಪ್ಲಾಟ್ ಫಾರ್ಮ್ ನೀಡುವ ಕಂಪೆನಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದ ಸೈಬರ್ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೈಬರ್ ಖದೀಮನನ್ನು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ನಿತೀಶ್ ಯಾದವ್ ಎಂಬಾತ ಸೈಬರ್ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ. ಕ್ಯಾಶ್ ಫ್ರೀ ಪೇಮೆಂಟ್ ಇಂಡಿಯಾ ಪ್ರೈ.ಲಿ. ಕಂಪೆನಿಗೆ 15.58 ಲಕ್ಷ ರೂ. ವಂಚನೆ ಮಾಡಿದ್ದ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಹರಿಯಾಣದ ಗುರ್‌ಗಾವ್‌ನಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ವಂಚನಾ ಜಾಲದಲ್ಲಿ ಶಾಮೀಲಾಗಿದ್ದಾನೆನ್ನಲಾದ ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.