ದೆಹಲಿ: ಕೊರೋನಾ ಕಾರಣದಿಂದಾಗಿ ತಡೆಹಿಡಿಯಲ್ಪಟ್ಟಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಡಿಸೆಂಬರ್15ರಿಂದ ಆರಂಭವಾಗಲಿದೆ. ಆದರೆ ಕೊರೋನಾ ನಾಲ್ಕನೇ ಅಲೆ ಹಾಗೂ ರೂಪಾಂತರಿ ವೈರಾಣು ಹಾವಳಿ ಆತಂಕವಿರುವ ರಾಷ್ಟ್ರಗಳಿಗೆ ಸೇವೆ ಇರಲ್ಲ.
ಜಗತ್ತಿನ ಕೆಲವು ಭಾಗಗಳಲ್ಲಿ ಬೋಟ್ಸ್‌ವಾನಾ ರೂಪಾಂತರಿ ಸೋಂಕು ಪತ್ತೆಯಾಗಿರುವಂತೆಯೇ ಡಿ.15ರಂದು ಅಂತಾರಾಷ್ಟ್ರೀಯ ವಿಮಾನಯಾನ ಶುರು ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಸಚಿವಾಲಯದಿಂದ ಸೋಂಕಿನ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದ 14 ದೇಶಗಳನ್ನು ಹೊರತುಪಡಿಸಿ ವಿಮಾನಯಾನ ಶುರುವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಯು.ಕೆ, ಸಿಂಗಾಪುರ, ಚೀನ, ಬ್ರೆಜಿಲ್, ಬಾಂಗ್ಲಾದೇಶ, ಮಾರಿಷಸ್, ಜಿಂಬಾಬ್ವೆ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಇಸ್ರೇಲ್ ಮತ್ತು ಹಾಂಕಾಂಗ್‌ಗಳಿಗೆ ವಿಮಾನಯಾನ ಆರಮಬ ಸದ್ಯಕ್ಕಿಲ್ಲ.