ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪಾಕಿಸ್ತಾನಕ್ಕೆ ಹಲವು ನಿರ್ಬಂಧ ಹೇರಿರುವ ಭಾರತ ಇದೀಗ ಶಾಹಿದ್ ಅಫ್ರಿದಿ ಅವರಿಗೂ ಶಾಕ್ ನೀಡಿದೆ. ಶಾಹಿದ್ ಅಫ್ರಿದಿ ಯೂಟ್ಯೂಬ್ ಚಾನೆಲನ್ನು ಭಾರತ ನಿಷೇಧಿಸಿದೆ.
ಪಹಲ್ಗಾಮ್ ಭಯೋತ್ಪಾದಕ ಘಟನೆಯ ಹಿನ್ನೆಲೆಯಲ್ಲಿ ಭಾರತ, ತನ್ನ ಭದ್ರತಾ ಸಂಸ್ಥೆಗಳ ವಿರುದ್ಧದ ಪ್ರಚೋದನಕಾರಿ, ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಇದೇ ವೇಳೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಚಾನೆಲನ್ನುಕೂಡಾ ನಿಷೇಧಿಸಲಾಗಿದೆ. ಭಾರತದ ಅತಿದೊಡ್ಡ ಶತ್ರು ಮತ್ತು ವಿಶ್ವದ ಅತಿದೊಡ್ಡ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ವಿಷಯವನ್ನು ನಿರಂತರವಾಗಿ ಪ್ರಚಾರ ಮಾಡುತ್ತಿದ್ದರು ಎಂದು ಅಫ್ರಿದಿ ಅವರು ತನ್ನ ಚಾನೆಲ್’ನಲ್ಲಿ ಬಿಂಬಿಸಿದ್ದರು. ಉಗ್ರರ ಜಪ ಮಾಡಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಭಾರತ ಶಾಕ್ ತನ್ನದೇ ರೀತಿಯಲ್ಲಿ ಶಾಕ್ ನೀಡಿದೆ.