ಯುಗಾದಿ ಹಬ್ಬಕೆ ಒಂದು ದಿನ ಮಾತ್ರ ಬಾಕಿ ಇದೆ.. ಪ್ರತಿ ವರ್ಷ ಹಬ್ಬಕ್ಕೆ ಎಲ್ಲಾ ರೀತಿಯ ತಯಾರು ಭರ್ಜರಿಯಾಗಿ ನಡೆಯುತ್ತೆ; ಆದ್ರೆ ಈ ಬಾರಿ ಕರೋನಾ ವೈರಸ್ ಹಿನ್ನಲೆ ಹಬ್ಬಕ್ಕೆ ಬ್ರೇಕ್ ಹಾಕಲಾಗಿದೆ . ಯಾರು ಕೂಡ ಮನೆಯಿಂದ ಹೊರಬರದಂತೆ ಆದೇಶ ನೀಡಲಾಗಿದ್ದು ; ೧೪೪ ಸೆಕ್ಷನ್ ಅನ್ನು ಮಾ.೩೧ ರವರೆಗೆ ಮುಂದೂಡಲಾಗಿದೆ. ಜೊತೆಗೆ ಸಂಪೂರ್ಣವಾಗಿ ಕರ್ನಾಟಕವನ್ನು ಲಾಕ್ ಡೌನ್ ಮಾಡಲಾಗಿದೆ.
ಇತ್ತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಹತ್ವದ ಹೇಳಿಕೆ ನೀಡಿದ್ದು; ಯುಗಾದಿಹಬ್ಬವನ್ನು ನಾನು ಮನೆಯಲ್ಲೇ ಆಚರಣೆ ಮಾಡುತ್ತೇನೆ. ನೀವು ಕೂಡ ಮನೆಯಲ್ಲೇ ಹಬ್ಬವನ್ನು ಆಚರಣೆ ಮಾಡಿ; ಯಾವುದೇ ಕಾರಣಕ್ಕೂ ಆಡಂಬರದ ಹಬ್ಬ ಬೇಡ. ಮಾರ್ಕೇಟ್‌ಗೆ ಹೋಗೋದನ್ನು ತಡೆಯಿರಿ ಅಂತ ಜನತೆಯಲ್ಲಿ ಬಿ ಎಸ್ ವೈ ಮನವಿ ಮಾಡಿಕೊಂಡಿದ್ದಾರೆ.ಜೊತೆಗೆ ಮಾ. ೩೧ ರವರೆಗೆ ಜನರು ಮನೆಯ ಒಳಗೆಯೇ ಇರಬೇಕು ಯಾರು ಕೂಡ ಮನೆಯಿಂದ ಹೊರಗೆ ಕಾಲಿಡಬಾರದು. ಸುಮ್ ಸುಮ್ನೆ ಓಡಾಟ ನಡೆಸಿದ್ರೆ ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ.ನಂತರ ಅದಕ್ಕೆ ನಾನು ಜವಬ್ದಾರಿ ಆಗಲ್ಲ. ನನ್ನನ್ನು ದೂಷಿಸಿಬೇಡಿ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ .
ಇದರ ಜೊತೆಗೆ ಮಾತು ಮುಂದುವರೆಸಿದ ಬಿ ಎಸ್ ವೈ ಲಾಕ್ ಡೌನ್‌ಗೆ ನಾಗರಿಕರು ಸಹಕರಿಸುವ ಅಗತ್ಯ ತುಂಬಾನೇ ಇದೆ. ಅಗತ್ಯವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಡಲಾಗುವುದು . ಇನ್ನು ಉಚಿತ ಆಹಾರ ವಿತರಣೆಯಿಂದ ಜನರು ಇಂದಿರಾ ಕ್ಯಾಂಟೀನ್‌ನಲ್ಲಿ ಹೆಚ್ಚು ಸೇರುತ್ತಿದ್ದು ; ಇದೀಗ ಇಂದಿರಾ ಕ್ಯಾಂಟೀನ್ ಮುಚ್ಚಲು ಸರ್ಕಾರ ನಿರ್ಧಾರ ಕೈಗೊಂಡಿದೆ.ಈ ಹಿನ್ನಲೆ ಹಣಕಾಸು ವಿಧೇಯಕದ ಮೇಲೆ ಉತ್ತರ ನೀಡುವ ವೇಳೆ ಪ್ಯಾಕೇಜ್ ಘೋಷಿಸಲು ಮುಂದಾಗಿದ್ದು; ವಿಧಾನ ಮಂಡಲದ ಉಭಯ ಸದನಗಳಲ್ಲಿ ಉತ್ತರ ನೀಡುವ ವೇಳೆ ಸಾಮಾಜಿಕ ಭದ್ರತೆ, ಆಹಾರ ಪೂರೈಕೆ, ಕೂಲಿಕಾರ್ಮಿಕರಿಗೆ ಒಂದು ತಿಂಗಳ ಕೂಲಿ, ಮನ್ರೇಗಾ ಯೋಜನೆಯ ಹಣ ಬಿಡುಗಡೆ , ಪಿಂಚಣಿ ಹಣ ವಿತರಣೆ , ಆರೋಗ್ಯ ಸೇವೆ ಸೇರಿದಂತೆ ಹಲವು ಯೋಜನೆಗಳಿಗೆ ಸುಮಾರು ೧೦ ಸಾವಿರ ಕೋಟಿ ಪ್ಯಾಕೇಜ್ ಘೋಷಣೆಗೆ ಸಿದ್ದತೆ ನಡೆಯುತ್ತಿದೆ.ಇದರಿಂದ ಬಡವರು, ಮಧ್ಯಮ ವರ್ಗದ ಜನರ ಆತಂಕ ದೂರ ಆಗಲಿದೆ.