ಹಾಸನ: ಹಾಸನ ಸಮೀಪ ಹನುಮಂತಪುರ ಗ್ರಾಮದಲ್ಲಿ ಇಬ್ಬರು ಯುವಕರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದ ಉತ್ತರ ಪ್ರದೇಶ ಮೂಲದ 24 ವರ್ಷದ ನವಾಬ್ ಮತ್ತು 30 ವರ್ಷದ ರಾಮ ಸಂಜೀವನ್ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ನಯನ್ಪುರ ಗ್ರಾಮದವರಾದ ಯುವಕರು ಉದ್ಯೋಗ ನಿಮಿತ್ತ ಹಾಸನ ಸಮೀಪದ ಹನುಮಂತಪುರ ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜ್ವರದಿಂದ ಬಳಲುತ್ತಿದ್ದ ಇವರು ಸೇವಿಸಿದ್ದ ಔಷಧಿ ಎಡವಟ್ಟಿನಿಂದಾಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.