ಯಾದಗಿರಿ:: ಹನಿಟ್ರ್ಯಾಪ್ ಪ್ರಕರಣವನ್ನು ವಿಚಾರಣೆ ಮಾಡ್ತೀವಿ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಬಿಜೆಪಿಯವ್ರು ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಜನಪ್ರತಿನಿಧಿಗಳ ಮೇಲೆ ಹನಿಟ್ರ್ಯಾಪ್ ವಿಚಾರವಾಗಿ ಯಾದಗಿರಿ ಜಿಲ್ಲೆಯ ಮಹಲ್ ರೋಜಾದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ ನೀಡಿದರು. ಹನಿಟ್ರ್ಯಾಪ್ ಆಗಿದೆ, ಹೇಗೆ, ಏನು ಎನ್ನುವುದು ಎಲ್ಲಾ ವಿಚಾರ ತನಿಖೆ ಆದ್ಮೇಲೆ ಗೊತ್ತಾಗುತ್ತದೆ. ಯಾರ್ಯಾರು ಸಚಿವರು, ಶಾಸಕರು ಅವರವರ ವಿಡಿಯೋ ರಿಲೀಸ್ ಆಗಬಾರದು ಎಂದು ಹೈಕೋರ್ಟ್ ಸ್ಟೇ ತಂದಿದ್ದಾರೆ ಅವರಿಗೆ ಕೇಳಬೇಕು ಎಂದರು.
ಬಿಜೆಪಿಯವರಿಗೆ ಸಿಬಿಐ ತನಿಖೆ ಮುಕ್ತ ಅವಕಾಶವಿತ್ತು, ಆದರೆ ಅವರ ಅವಧಿಯಲ್ಲಿ ಯಾವುದೇ ತನಿಖೆ ಆಗಿಲ್ಲ, ಯಾವುದನ್ನೂ ಸಿಬಿಐ ತನಿಖೆಗೆ ಕೊಟ್ಟಿಲ್ಲ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದಾಗ ಮಾತ್ರ ಸಿಬಿಐ ಎಂದು ಅಬ್ಬರಿಸಿ ಹೇಳಿತ್ತಾರೆ. ಆದರೆ ನಮ್ಮ ರಾಜ್ಯ ಪೊಲೀಸರು ಕಾಂಫ್ನಿಡೆಂಟ್ ಆಗಿದ್ದಾರೆ. ಕಂಪ್ಲೇಟ್ ಬಂದರೆ ತನಿಖೆ ಮಾಡೇ ಮಾಡುತ್ತಾರೆ ಎಂದು ಹೇಳಿದರು.
ಇಂತಹ ಪ್ರಕರಣಗಳಲ್ಲಿ ಕಂಪ್ಲೇಟ್ ಕೊಟ್ಟರೆ, ಎಫ್ಐಆರ್ ಆದರೆ 100% ತನಿಖೆ ಆಗುತ್ತದೆ. ಮುಖ್ಯ ಮಂತ್ರಿಗಳೇ ತನಿಖೆ ಮಾಡ್ತಿವಿ ಎಂದು ತಿಳಿಸಿದ್ದಾರೆ. ಹೀಗಾಗಿ 100% ಇನ್ವೇಷ್ಟಿಗೆಷನ್ ಆಗುತ್ತದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ರಾಜಿನಾಮೆ ನೀಡಿದ ವಿಚಾರ, ಅವರು ಮನೆಯ ಮಾಲೀಕರಿದ್ದಾ ಹಾಗೇ ಅವರೇ ರಾಜೀನಾಮೆ ನೀಡಿರುವುದು ಕೊಂಚ ಆಶ್ಚರ್ಯವಾಯಿತು. ಮೌಲ್ಯಾಧಾರಿತ ರಾಜಕಾರಣಕ್ಕೆ ಮನ್ನಣೆ ಕೊಟ್ಟಿದ್ದು ಕರ್ನಾಟಕ ರಾಜ್ಯ, ಯಾರು ಶುದ್ಧ ಹಸ್ತರು, ಯಾರೂ ಜನಪರವಾಗಿರುವರು, ಜನಪರ ಕಾಳಜಿ ಇರುವ ಅಭಿವೃದ್ಧಿ ಪರವಾದ ರಾಜಕಾಣಿಗಳಿಗೆ ಮನ್ನಣೆ ಕೊಟ್ಟ ರಾಜ್ಯ ಇದಾಗಿದೆ. ಆದರೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಕಲುಷಿತವಾಗ್ತಿರೋದು ಬಿಜೆಪಿಯಿಂದ ಆರಂಭವಾಗಿದೆ ಎಂದು ಟೀಕಿಸಿದರು.