ಗೋಕರ್ಣ: ಸಚಿವ ರಾಜಣ್ಣ ಸಲ್ಲಿಸಿರುವ ‘ಹನಿಟ್ರ್ಯಾಪ್’ ದೂರನ್ನ ಪರಿಶೀಲನೆಗಾಗಿ ಕಾನೂನು ತಂಡಕ್ಕೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕರಾವಳಿ ಪ್ರವಾಸದ ನಡುವೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜಣ್ಣ ಅವರ ಮನವಿ ಬಗ್ಗೆ ಪ್ರತಿಕ್ರಿಯಿಸಿದರು. ತಮ್ಮನ್ನು ಹನಿಟ್ರ್ಯಾಪ್ಗೆ ಮಾಡಲು ನಡೆದಿರುವ ಪ್ರಯತ್ನ ಬಗ್ಗೆ ತನಿಖೆಗೆ ಕೋರಿ ಸಚಿವ ರಾಜಣ್ಣ ಸಲ್ಲಿಸಿರುವ ಮನವಿಯನ್ನು ಕಾನೂನು ಚೌಕಟ್ಟಿನೊಳಗೆ ವಿವೇಚನೆಯಿಂದ ಪರಿಶೀಲಿಸಲಾಗುತ್ತದೆ. ಅನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.