ವಿಭಿನ್ನವಾದ ಸೀರೆಗಳು ನಮ್ಮ ಬಳಿ ಇರಬೇಕು ಎಂದು ಬಯಸುವ ಹೆಣ್ಣುಮಕ್ಕಳಿಗಿಂತ ವಿಭಿನ್ನವಾದ ಬ್ಲೌಸ್ ಡಿಸೈನ್‍ಗಳು ನಾ ಕೊಳ್ಳುವ ಸೀರೆಗಳಿಗಿಗೆ ಸರಿ ಹೊಂದಬೇಕು ಎಂದು ಬಯಸುವ ಮಂದಿಯೇ ಹೆಚ್ಚಿನವರಾಗಿದ್ದಾರೆ.. ಸೀೀರೆಗಿಂತ ದುಬಾರಿ ಅದಕ್ಕೆ ಹೊಲಿಸುವ ಬ್ಲೌಸ್‍ಗಳಿಗೆ ಎಂಬಂತಾಗಿದೆ ಇಂದಿನ ಪರಿಸ್ಥಿತಿ. ಹೌದು..1000 ರೂಪಾಯಿಯ ಸೀರೆ ಕೊಂಡುಕೊಂಡರೆ 1500ರಿಂದ 2000 ರೂಪಾಯಿವರೆಗೆ ಬ್ಲೌಸ್ ಹೊಲಿಸುವ ಖರ್ಚು ಬೀಳುತ್ತದೆ.
ಈಗಂತೂ ಬ್ಲೌಸ್ ಡಿಸೈನ್‍ಗಳು ಸಾವಿರಾರಿವೆ.. ಸಿಂಪಲ್ ಬ್ಲೌಸ್ ನೆಕ್, ಹೈ ನೆಕ್ ಬ್ಲೌಸ್, ಬೋಟ್ ನೆಕ್, ಮಿರರ್ ವರ್ಕ್, ಸೈಡ್ ಟೈ ಅಪ್, ಪಫ್ ಸ್ಲೀವ್ಸ್, ಬ್ಲೆಟ್ ಬ್ಲೌಸ್, ಡೀಪ್ ವಿ ನೆಕ್, ಸ್ವೀಟ್ ಹಾರ್ಟ್ ನೆಕ್ ಬ್ಲೌಸ್ ಡಿಸೈನ್ಸ್..ಹೀಗೆ ಹೇಳ್ತಾ ಹೋದರೆ ಲಿಸ್ಟ್ ಇನ್ನೂ ಉದ್ದಕ್ಕೇ ಬೆಳೆಯುತ್ತದೆ. ಇದಕ್ಕೆ ಸರಿಯಾಗಿ ಟೈಲರ್‍ಗಳ ಬೇಡಿಕೆಯೂ ಹೆಚ್ಚಿದ್ದು, ಮದ್ವೆ, ಮುಂಜಿಯಂತಹ ಶುಭ ಸಮಾರಂಭಗಳು, ಹಬ್ಬ ಹರಿದಿನಗಳು ಬಂದರಂತೂ ಕೇಳೋದೇ ಬೇಡ.. ಟೈಲರ್‍ಗಳು ಬಗೆಬಗೆಯ ಬ್ಲೌಸ್ ಡಿಸೈನ್ಸ್ ಮಾಡೋದ್ರಲ್ಲೇ ಬ್ಯುಸಿಯಾಗಿಬಿಟ್ಟಿರುತ್ತಾರೆ. ಇವು ಮಾತ್ರವಲ್ಲದೆ ಹ್ಯಾಂಡ್ ವರ್ಕ್ ಎಂಬ್ರಾಯಿಡರಿ ಹಾಗೂ ಮಶಿನ್ ವರ್ಕ್ ಎಂಬ್ರಾಯಿಡರಿಗೂ ಈಗ ಇನ್ನಿಲ್ಲದ ಬೇಡಿಕೆ.. ಸೀರೆಗಿಂತ ನೋಡುಗರ ಕಣ್ಣು ಬ್ಲೌಸ್ ಮೇಲೆ ನೆಟ್ಟಿದ್ದರೂ ಅಚ್ಚರಿಪಡಬೇಕಿಲ್ಲ..
© 2020 Udaya News – Powered by RajasDigital.