ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮಾತಿನಲ್ಲಿ ಬಹಳ ತಲೆಹರಟೆ ಅನ್ನಿಸಿದರೂ ಮಾಡುವ ಅನೇಕ ಕೆಲಸ ಕಾರ್ಯಗಳು ಜನರ ಮೆಚ್ಚುಗೆ ಗಳಿಸಿದೆ. ಸಾಮಾಜಿ ಜಾಲತಾಣದಲ್ಲಿ ಅವರು ಹಂಚಿಕೊಳ್ಳುವ ಅನೇಕ ವಿಚಾರಗಳು ಜನ ಮನ್ನಣೆ ಗಳಿಸಿದೆ.. ಹೌದು.. ಇತ್ತೀಚೆಗಷ್ಟೇ ಸರ್ಕಾರಿ ಶಾಲೆಯೊಂದರ ಕಾರ್ಯವೈಖರಿ ಹಾಗೂ ಆ ಶಾಲೆಯ ಅಭಿವೃದ್ಧಿಗೆ ಕಾರಣರಾದ ಶಿಕ್ಷಕನ ಬಗೆಗೆ ಪ್ರಥಮ್ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು.

ದನದ ಕೊಟ್ಟಿಯಂತಿದ್ದ ಸರ್ಕಾರಿ ಶಾಲೆಯನ್ನು ಎಂಎಲ್ ಎ, ಮಿನಿಸ್ಟರ್ ಗಳು ತಮ್ಮ ಕಡೆಯ ಮಕ್ಕಳಿಗೆ ರೆಕಮೆಂಡ್ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ಧಿಪಡಿಸಿದ ಕೀರ್ತಿ ಕುಮಾರ ಸ್ವಾಮಿ ಮೇಷ್ಟ್ರಿಗೆ ಸಲ್ಲುತ್ತದೆ, ಇವರೇ ನಮ್ಮ ರಿಯಲ್ ಲೈಫ್ ಸೂಪರ್ ಸ್ಟಾರ್ ಎಂಬುದಾಗಿ ಪ್ರಥಮ್ ಬರೆದುಕೊಂಡಿದ್ದಾರೆ.


ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡಿ ಬೆಳೆದಿರುವ ಈ ಮೇಷ್ಟ್ರು, ಅಲ್ಲಿನ ಸಂಸ್ಕೃತಿ ಪರಂಪರೆಗೆ ತಕ್ಕಂತೆ ಇಲ್ಲಿನ ಶಿಕ್ಷಣವನ್ನು ಮಾರ್ಪಾಡು ಮಾಡಿದ್ದಾರೆ. ’ನೀನು ತಿಂದಿರೋದು ನೂರಾರು ಜನ ಭಿಕ್ಷೆ, ಆದ್ದರಿಂದ ಜನರ ಭಿಕ್ಷೆ ತಿಂದ ನೀನು ಹತ್ತು ಜನಕ್ಕಾದರೂ ನೆರವಾಗು’ ಎಂಬ ಮೇಷ್ಟ್ರ ಮಾತು ಪ್ರಥಮ್ ರವರ ಮನಮುಟ್ಟಿದೆಯಂತೆ..