ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ, ದುಷ್ಕರ್ಮಿ ಗಳಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಎಂಬ ಯುವಕನನ್ನು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ರಾತ್ರಿ ಚಿಕಿತ್ಸೆ ಪಡೆಯುತ್ತಿರುವ ಮೆಗ್ಗಾನ್ ಆಸ್ಪತ್ರೆಗೆ ಭೇಟಿಯಾಗಿ, ಆರೋಗ್ಯ ವಿಚಾರಿಸಿದರು.
ಗಾಯಾಳು ಪ್ರೇಮ್ ಸಿಂಗ್ ಅವರ ಪೋಷಕರ ಜತೆಯೂ ಸಚಿವರು ಮಾತನಾಡಿ ಘಟನೆಯ ಬಗ್ಗೆ ವಿಚಾರಿಸಿದರು. ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದ ಸಚಿವರು, ದುಷ್ಟರನ್ನು ಆದಷ್ಟು ಬೇಗ ಹೆಡೆಮುರಿ ಕಟ್ಟಿ ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಿದರು.
ಘಟನೆಯ ಹಿಂದೆ, ಇರಬಹುದಾದ ಮತಾಂಧ ಶಕ್ತಿಗಳನ್ನು ಬಯಲು ಮಾಡಬೇಕಿದೆ, ಎಂದು ಸಚಿವರು ತಿಳಿಸಿದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಚಿವರೊಂದಿಗೆ ಉಪಸ್ತಿತರಿದ್ದರು.





















































