ಈಗಂತೂ ಎಲ್ಲೆಡೆ ಗಾಯಕಿ ರಾನು ಮೊಂಡಾಲ್ ರದ್ದೇ ಸುದ್ದಿ..ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಗಾಯಕಿಯ ಹಾಡಿನ ವಿಡಿಯೋಗಳು ಅದೆಷ್ಟೋ..ಇವರ ಪ್ರತಿಭೆಯನ್ನು ಗುರುತಿಸಿದ ಗಾಯಕ ಹಿಮೇಶ್ ರೇಶ್ಮಿಯಾ ತಮ್ಮ ಮುಂಬರುವ ಚಿತ್ರ `ಹ್ಯಾಪಿ ಹಾರ್ಡಿ ಆಂಡ್ ಹೀರ್” ಚಿತ್ರದಲ್ಲಿ ಹಾಡುವ ಅವಕಾಶ ನೀಡಿ 6-7ಲಕ್ಷ ಸಂಭಾವನೆ ಕೊಟ್ಟಿದ್ದಾರೆ. ಇದೀಗ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲುಮಿಯಾ ಕೂಡ ರಾನುರವರಿಗೆ ಭಾರೀ ಉಡುಗೊರೆಯೊಂದನ್ನು ನೀಡಿದ್ದಾರೆ. ಬರೋಬ್ಬರಿ 55 ಲಕ್ಷ ರೂಪಾಯಿ ಬೆಲೆ ಬಾಳುವ ಮನೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ರೈಲ್ವೇ ನಿಲ್ದಾಣದಲ್ಲಿ ಹಾಡುವ ಮೂಲಕ ಜೀವನ ಸಾಗಿಸುತ್ತಿದ್ದ ಈಕೆಗೆ ಈಗ ಬಾಲಿವುಡ್ ರಂಗದ ಅನೇಕರು ಸಹಾಯಹಸ್ತ ಚಾಚುವುದಲ್ಲದೆ, ಹಾಡಲು ವೇದಿಕೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ.
© 2020 Udaya News – Powered by RajasDigital.