ಬೆಂಗಳೂರು,ಡಿ.16: ಮಹಿಳೆಯರು ಎಲ್ಲಾ ರಂಗಗಳಲ್ಲೂ ಪುರುಷರಿಗಿಂತ ಕಡಿಮೆಯೇನಿಲ್ಲ ಎಂಬಂತೆ ದಿಟ್ಟ ಹೆಜ್ಜೆಯಿಟ್ಟಿರುವ ಕಾಲವಿದು..ಆದರೆ ರಾಜಕೀಯವಾಗಿ ಇನ್ನೂ ಹೆಚ್ಚಿನ ಅವಕಾಶಗಳು ಮಹಿಳೆಯರಿಗೆ ಲಭ್ಯವಾಗಬೇಕಿದ್ದು, ಮಹಿಳಾ ಸಬಲೀಕರಣಕ್ಕೆ ಪುಷ್ಟಿ ಸಿಗಬೇಕಿದೆ..ಈ ನಿಟ್ಟಿನಲ್ಲಿ ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ , ವುಮೆನ್ಸ್ ಡಿಗ್ನಿಟಿ ಕಾನ್ಫರೆನ್ಸ್ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದರೂಸಲಾಮ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ಹೇಮಲತಾ ಮಹಿಷಿ, ಹಿರಿಯ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ನಂತರ ಮಾತನಾಡಿದ ಹಿರಿಯ ತನಿಖಾ
ವರದಿಗಾರ್ತಿಯಾಗಿರುವ ವಿಜಯಲಕ್ಷ್ಮಿ ಶಿಬರೂರು, ಮಹಿಳೆಯರು ರಾಜಕೀಯ ರಂಗದಲ್ಲಿ ಅತೀ ಕಡಿಮೆ
ಸಂಖ್ಯೆಯಲ್ಲಿದ್ದು, ಹೆಚ್ಚಿನ ಪ್ರೋತ್ಸಾಹ ಹಾಗೂ ಅವಕಾಶಗಳು ಲಭ್ಯವಾಗಬೇಕಿದೆ..ಮಹಿಳೆಯರ ಸಬಲೀಕರಣಕ್ಕೆ
ಅವರ ರಾಜಕೀಯ ರಂಗಪ್ರೇವೇಶ ಅತೀ ಅವಶ್ಯವಾಗಿದೆ ಎಂಬುದಾಗಿ ಹೇಳಿದರು.