ಮಂಗಳೂರು: ಸ್ಯಾಂಡಲ್‌ವುಡ್‌ನಲ್ಲೀಗ ‘ಚಾರ್ಲಿ’ಯದ್ದೇ ಸುದ್ದಿ. ‘ಕಿರಿಕ್ ಪಾರ್ಟಿ’ ಮೂಲಕ ಚಂದನವನದಲ್ಲಿ ಸಂಚಲನ ಸೃಷ್ಟಿಸಿರುವ ಸಿಂಪಲ್ ತಾರೆ ರಕ್ಷಿತ್ ಶೆಟ್ಟಿ ಇದೀಗ ಮತ್ತೊಂದು ಸಿಇಮಾ ಮೂಲಕ ಸಿನಿ ರಸಿಕರ ಗಮನಸೆಳೆದಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಅಭಿನಯದ “ಚಾರ್ಲಿ’ ಶುಕ್ರವಾರ ಬಿಡುಗಡೆಗೊಂಡಿದೆ, ಈ ಸಿನಿಮಾಗೆ ಸಕತ್ ರೆಸ್ಪಾನ್ಸ್ ಸಿಗುತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದಾಗುತ್ತಿದೆ. ಇದರಲ್ಲಿ ‘ಚಾರ್ಲಿ’ ಹೆಸರಿನ ನಾಯಿಯೇ ಕೇಂದ್ರ ಬಿಂದು. ಮನುಷ್ಯ ಮತ್ತು ಶ್ವಾನದ ನಡುವಿನ ಭಾವನಾತ್ಮಕ ಸಂಬಂಧವನ್ನು ಕಥೆಯಲ್ಲಿ ಬಿಂಬಿಸಲಾಗಿದೆ.
ಈ ಸಿನಿಮಾದಿಂದ ಪ್ರೇರಣೆಗೊಂಡ ಬಂದರು ನಗರಿಯ ಪೊಲೀಸರು ತಮ್ಮ ಇಲಾಖಯ ಶ್ವಾನದಳದ ನಾಯಿಮರಿಯೊಂದಕ್ಕೆ “ಚಾರ್ಲಿ’ ಎಂಬ ಹೆಸರಿಟ್ಟಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಈ ಶ್ವಾನಕ್ಕೆ ‘ಚಾರ್ಲಿ ಎಂದು ನಾಮಕರಣ ಮಾಡಲಾಗಿದೆ.
Inspired by @rakshitshetty film ‘Charlie777’, Mangaluru City Armed Reserve personnel name 3 month old female pup, a new dog squad member after ‘Charlie’ @compolmlr @DgpKarnataka @range_igp @XpressBengaluru @vinndz_TNIE @ramupatil_TNIE @Sandalwoodnews @santwana99 pic.twitter.com/jXc36D8G1v
— Divya Cutinho_TNIE (@cutinha_divya) June 10, 2022





















































