ಭಾರತ ಮತ್ತು ಪಾಕಿಸ್ತಾನ್ ನಡುವಿನ ಯುದ್ಧ ಕಾರ್ಮೋಡ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಚಿನಕುರುಳಿ ಕ್ರಿಕೆಟ್ ಕದನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೇ 17 ರಿಂದ ಮತ್ತೆ ರಂಗೇರಲಿದೆ. ಮುಂದಿನ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.
ಮೇ 17 ರಿಂದ ಐಪಿಎಲ್ ಸೀಸನ್-18 ಮತ್ತೆ ನಡೆಯಲಿದ್ದು, ಮುಂದಿನ ಪಂದ್ಯಗಳು ಕೆಲವೇ ರಾಜ್ಯಗಳಲ್ಲಿ ನಡೆಯಲಿದೆ. ಮೇ 17 ರಿಂದ ಜೂನ್ 3 ರವರೆಗೆ ಆರು ನಗರಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಗಡಿಗೆ ಸಮೀಪವಿರುವ ನಗರಗಳನ್ನು ಕೈಬಿಡಲಾಗಿದೆ. ದೆಹಲಿ, ಮುಂಬೈ ಬೆಂಗಳೂರು, ಜೈಪುರ, ಲಕ್ನೋ ಮತ್ತು ಅಹಮದಾಬಾದ್ ನಗರಗಲ್ಲಿ ಮುಂದಿನ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.