ವಿಶ್ವದೆಲ್ಲೆಡೆ ಕರೋನಾ ವೈರಸ್ ರುದ್ರತಾಂಡವವಾಡುತ್ತಿದೆ. ಚೀನಾ ನಂತರ ಇಟಲಿ ಸಂಪೂರ್ಣ ಸ್ಮಶಾನವಾಗಿದೆ. ಇಟಲಿ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇತ್ತ ಭಾರತದಲ್ಲೂ ದಿನದಿಂದ ದಿನಕ್ಕೆ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದ ; ಭಾರತ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮಂಗಳವಾರ ಮಧ್ಯರಾತ್ರಿಯಿಂದ ೨೧ ದಿವಸ ಇಡೀ ಭಾರತ ಸ್ತಬ್ಧವಾಗಿದೆ. ರಾಜ್ಯದಲ್ಲೂ ಮಾ.೩೧ರವರೆಗೆ ಇದ್ದ ಲಾಕ್ ಡೌನ್ ಮುಂದುವರೆದಿದ್ದು ಕರೋನಾ ಬಗ್ಗೆ ಕಾಳಜಿವಹಿಸಲು ಮುಂದಾಗಿದೆ.
ಇನ್ನ ಪ್ರತಿದಿನ ದೇಶದ ಹಾಗೂ ಹೋಗುಗಳು.. ಕರೋನಾ ವೈರಸ್ ಯಾವ ರೀತಿ ಜನರನ್ನು ಆವರಿಸುತ್ತಿದೆ ಇದೆಲ್ಲದರ ಬಗ್ಗೆ ದಿನದ ೨೪/೭ ಸಮಯ ಕೆಲಸನಿರ್ವಹಿಸುತ್ತಿರುವ ಮಾದ್ಯಮ ವರ್ಗದವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ಲಾಘಿಸಿದ್ದಾರೆ. ಇನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.ಕೊರೊನಾ ಸೋಂಕಿನ ಭಯಭೀತ ಸ್ಥಿತಿಯಲ್ಲಿ ದಿಟ್ಟತನದಿಂದ ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರದವರದಿಗಾರರು,ಕ್ಯಾಮೆರಾಮೆನ್‌ಗಳು ಮುದ್ರಣಾಲಯದ ಕಾರ್ಮಿಕರು,ಚಾಲಕರು,ಪತ್ರಿಕೆಯ ವಿತರಕರೆಲ್ಲರಿಗೂ ಅಭಿನಂದನೆಗಳು.ಮಾಧ್ಯಮ ಕ್ಷೇತ್ರ ಕೂಡಾ ಅಗತ್ಯ ಸೇವೆ ಎಂದು ಪರಿಗಣಿಸಿ ರಾಜ್ಯಸರ್ಕಾರ ಇವರ ಸುರಕ್ಷತೆಗೆ ಗಮನನೀಡಬೇಕು ಅಂತ ಬರೆದು ಕೊಂಡಿದ್ದಾರೆ.
ಇತ್ತ ದೇಶಕ್ಕೆ ದೇಶವೇ ಕರೋನಾ ಭಯದಿಂದ ದಿನ ಸಾಗಿಸುತ್ತಿರುವ ಹಿನ್ನಲೆ ಜನರ ಪ್ರಾಣ ಉಳಿಸಲು ವೈದ್ಯರು ಹಗಲಿರುಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ . ತಮ್ಮ ಪ್ರಾಣವನ್ನು ತಮ್ಮಕುಟುಂಬವನ್ನು ಲೆಕ್ಕಿಸದೆ . ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಇತ್ತ ಸೇನೆ ಹಾಗೂ ಪೊಲೀ ಸ್ ಇಲಾಖೆ ತಮ್ಮ ಕರ್ತವ್ಯವನ್ನು ಚಾಚುತಪ್ಪದೆ ನಿರ್ವಹಿಸುತ್ತಿದೆ. ಜೊತೆಗೆ ಇಷ್ಟೆಲ್ಲಾ ನಿಯಂತ್ರಣ ಮಾಡಲು ಹೊರಟ ಸರ್ಕಾರದ ವಿರುದ್ಧ ಕೆಲವು ಕಿಡಿಗೇಡಿಗಳು ತಮ್ಮ ಬುದ್ದಿಯನ್ನು ತೋರಿಸುತ್ತಿದ್ದು ಪೋಲಿಸರು ಲಾಠಿ ರುಚಿಯನ್ನು ತೋರಿಸುತ್ತಿದ್ದಾರೆ.