ಬೆಂಗಳೂರು: ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದಾನಿಯ ಬಂದರಲ್ಲಿ 3000 ಟನ್ ಮಾದಕವಸ್ತು ಸಿಕ್ಕಿದರೂ ಸರಿಯಾದ ತನಿಖೆ ನಡೆಸದೆ ಕೈತೊಳೆದುಕೊಂಡಿದ್ದು ಬಿಜೆಪಿಯ ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್,ಮಾದಕ ವ್ಯಸನ, ಕೋಮುಸಂಘರ್ಷಕ್ಕೆ ಯುವ ಸಮೂಹವನ್ನು ತಳ್ಳುವ ಮೂಲಕ ಬಿಜೆಪಿ ಈ ದೇಶದ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ ಎಂದು ಆರೋಪಿಸಿದೆ. ಈ ಸಂಬಂಧದ ವೀಡಿಯೋವನ್ನೂ ಪೋಸ್ಟ್ ಮಾಡಿದೆ.
ಹೋರಾಟಗಳ ತವರೂರಾಗಿದ್ದ ಶಿವಮೊಗ್ಗ ಇಂದು ಮಾದಕ ವ್ಯಸನಿಗಳ ಅಡ್ಡೆಯಾಗಿದೆ.
ಅದಾನಿಯ ಬಂದರಲ್ಲಿ 3000 ಟನ್ ಮಾದಕವಸ್ತು ಸಿಕ್ಕಿದರೂ ಸರಿಯಾದ ತನಿಖೆ ನಡೆಸದೆ ಕೈತೊಳೆದುಕೊಂಡಿದ್ದು ಬಿಜೆಪಿಯ ಹೊಣೆಗೇಡಿತನಕ್ಕೆ ಹಿಡಿದ ಕೈಗನ್ನಡಿ.
ಮಾದಕ ವ್ಯಸನ,ಕೋಮುಸಂಘರ್ಷಕ್ಕೆ ಯುವ ಸಮೂಹವನ್ನು ತಳ್ಳುವ ಮೂಲಕ ಬಿಜೆಪಿ ಈ ದೇಶದ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ. pic.twitter.com/TI1X2RhQSE
— Karnataka Congress (@INCKarnataka) July 25, 2022
;ಗೃಹಸಚಿವರ ತವರು ಜಿಲ್ಲೆಯ ಕಾಲೇಜುಗಳ ಕ್ಯಾಂಪಸ್ ಒಳಗೆ ಮಾದಕ ವ್ಯಸನದ ಗಬ್ಬು ವಾಸನೆ ನಾರುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇಕೆ? ಇದರಲ್ಲೂ 40% ಹೊಡೆದುಕೊಳ್ಳೋಣ ಎಂಬ ನೀಚತನವೇ? ಎಂದಿರುವ ಕಾಂಗ್ರೆಸ್, ಮಕ್ಕಳ ಭವಿಷ್ಯದ ಬದುಕಿಗೆ ಕೊಳ್ಳಿ ಇಡುವ ಈ ಮಾದಕವ್ಯಸನದ ವಿರುದ್ಧ ಕ್ರಮಕೈಗೊಳ್ಳಿ ಇಲ್ಲವಾದರೆ ರಾಜೀನಾಮೆ ಕೊಡಿ ಎಂದು ಸಚಿವ ಅರಗ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಗೃಹಸಚಿವರ ತವರು ಜಿಲ್ಲೆಯ ಕಾಲೇಜುಗಳ ಕ್ಯಾಂಪಸ್ ಒಳಗೆ ಮಾದಕ ವ್ಯಸನದ ಗಬ್ಬು ವಾಸನೆ ನಾರುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿರುವುದೇಕೆ?
ಇದರಲ್ಲೂ 40% ಹೊಡೆದುಕೊಳ್ಳೋಣ ಎಂಬ ನೀಚತನವೇ?@JnanendraAraga ಅವರೇ ಮಕ್ಕಳ ಭವಿಷ್ಯದ ಬದುಕಿಗೆ ಕೊಳ್ಳಿ ಇಡುವ ಈ ಮಾದಕವ್ಯಸನದ ವಿರುದ್ಧ ಕ್ರಮಕೈಗೊಳ್ಳಿ ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರಹೋಗಿ.
— Karnataka Congress (@INCKarnataka) July 25, 2022






















































