ಮನೆಯ ಅಂದವನ್ನು ಹೆಚ್ಚಿಸೋದಕ್ಕೆ ಕೆಲವು ಗಿಡಗಳು..ವಾಸ್ತು ಶಾಸ್ತ್ರಕ್ಕೆ ಸೂಕ್ತವಾಗುವಂತೆ ಮತ್ತೆ ಹಲವು..ಹೀಗೆ ಪ್ರತಿ ಮನೆಗಳಲ್ಲೂ ಒಂದಿಲ್ಲೊಂದು ಗಿಡಗಳು ಇದ್ದೇ ಇರುತ್ತವೆ..ಅದ್ರಲ್ಲೂ ಮನೆಗಳಲ್ಲಿ ಅದೃಷ್ಟ, ಹಣವನ್ನು ಬರಮಾಡುತ್ತೆ ಅಂತ ಮನಿಪ್ಲ್ಯಾಂಟ್ ಗಳನ್ನು ಬೆಳೆಸೋರು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ..ಆದ್ರೆ ನೀವು ಮನಿ ಪ್ಲ್ಯಾಂಟ್ ಬೆಳೆಸುವ ಮುನ್ನ ತಿಳಿದಿರಬೇಕಾದ ಮಾಹಿತಿಗಳೇನೇನು ಗೊತ್ತಾ.. ?
ಮನೆಯಲ್ಲಿ ಮನಿಪ್ಲ್ಯಾಟ್ ಬೆಳೆಸೋದ್ರಿಂದ ವಾಸ್ತು ಪ್ರಕಾರ ಲಾಭದಾಯಕ, ಧನಕಾರಕ ಎಂದು ಹೇಳಲಾಗುತ್ತದೆ..ವಾಸ್ತು ಶಾಸ್ರ್ತ ಅಧ್ಯಯನ ಮಾಡುವವರು ಹೇಳುವಂತೆ ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ತಡೆದು ಪಾಸೆಟಿವ್ ಎನರ್ಜಿ ತುಂಬುತ್ತದೆಯಂತೆ. ಆದರೆ ಅದಕ್ಕೂ ಒಂದು ರೀತಿ ನೀತಿಯಿದೆ..ಎಲ್ಲೆಂದರಲ್ಲಿ ಗಿಡವನ್ನು ಬೆಳೆಸುವಂತಿಲ್ಲ..ಸರಿಯಾದ ಸ್ಥಳ ದಿಕ್ಕಿನಲ್ಲಿ ಮನಿಪ್ಲ್ಯಾಂಟ್ ಬೆಳೆಸದಿದ್ದರೆ ಮನೆಯವರ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯದ ಮೇಲೂ ಇದು ಕೆಟ್ಟ ಪರಿಣಾಮ ಬೀರಲು ಕಾರಣವಾಗುತ್ತದೆ.
ಬೇರೆಯವರ ಬಳಿಯಿಂದ ಮನಿ ಪ್ಲ್ಯಾಂಟ್ ತರಬೇಕಾದರೆ ಯಾವುದೇ ಕಾರಣ ನೀಡಿ ತರಬಾರದಂತೆ ಹಾಗೆ ತಂದರೆ ಯಾವುದೇ ಪ್ರಯೋಜನ ಸಿಗುವುದಿಲ್ಲ ಎಂಬ ನಂಬಿಕೆಯೂ ಇದೆ.. ಇನ್ನು ತಂದ ಮನಿ ಪ್ಲ್ಯಾಂಟನ್ನು ನಿತ್ಯವೂ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕಿದೆ..ಬೇಕಾದಷ್ಟು ನೀರನ್ನು ಹಾಕುವುದು, ಒಣಗಿದ ಎಲೆಗಳನ್ನು ಕೀಳುವುದು ಮಾಡುತ್ತಿರಬೇಕು. ಇಷ್ಟೆಲ್ಲಾ ಜೋಪಾನ ಮಾಡಿದರೂ ಮನಿ ಪ್ಲ್ಯಾಂಟ್ ಚೆನ್ನಾಗಿ ಬೆಳೆದಿಲ್ಲವೆಂದಾದರೆ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದರ್ಥವಾಗುತ್ತದೆ..
ಎಲ್ಲರೂ ಗಮನಿಸಬೇಕಿರುವ ಅಂಶವೆಂದರೆ ಮನಿ ಪ್ಲ್ಯಾಂಟ್ ಗಳನ್ನು ಮನೆಯ ಹೊರಗೆ ಎಳೆಸುವ ಬದಲು ಮನೆಯೊಳಗೆ ಬೆಳೆಸುವುದರಿದ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು.