ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯಿದೆ 94-C ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು ರೂ.30000 ದಿಂದ ವಾರ್ಷಿಕ ಗರಿಷ್ಟ ರೂ 1,20,000 ಕ್ಕೆ ಹೆಚ್ಚಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿರುವ ಸಚಿವರು ಗರಿಷ್ಟ ಆದಾಯದ ಮಿತಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ-೧೯೬೪ (ಕರ್ನಾಟಕ
ಕಾಯಿದೆ-೧೨ ೧೯೬೪) 94-C ಗೆ
ತಿದ್ದುಪಡಿ ತಂದು ಗರಿಷ್ಟ ಮಿತಿಯನ್ನು ರೂ 1,20’000/- ಕ್ಕೆ ಪರಿಷ್ಕರಿಸಿ ಆದೇಶ
ಹೊರಡಿಸಲು ಕೋರಿದ್ದಾರೆ.
ಗೃಹ ಸಚಿವರು, ತಮ್ಮ ಪತ್ರದಲ್ಲಿ, ಆಹಾರ ಇಲಾಖೆಯಲ್ಲಿ ಬಿ ಪಿ ಎಲ್ ಕಾರ್ಡ್
ಫಲಾನುಭವಿಗಳಾಗಲು ಪ್ರಸ್ತುತ ಇರುವ ಆದಾಯದ ಮಿತಿ ರೂ 1,20000/- ಇರುವುದನ್ನು ಮುಖ್ಯಮಂತ್ರಿಗಳ ಹಾಗೂ ಕಂದಾಯ ಸಚಿವರ
ಗಮನಕ್ಕೆ ತಂದಿದ್ದಾರೆ.