ಬೊಜ್ಜಿನ ಸಮಸ್ಯೆ ದೇಹದ ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಈಗಂತೂ ಲೆಕ್ಕಕ್ಕೆ ಸಿಲುಕದಷ್ಟರಮಟ್ಟಿಗಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಲಿದೆ. ಈ ಕಾರಣದಿಂದ ಆರೋಗ್ಯವಾಗಿರಲು ಬಯಸುವವರು ಫಿಟ್ ನೆಸ್ ಸೆಂಟರ್ ಗಳು, ಯೋಗ ತರಬೇತಿ ಇಲ್ಲವೇ ಯಾವ್ಯಾವುದೋ ಔಷಧಗಳ ಬಳಕೆ ಹೀಗೆ ಅನೇಕಾನೇಕ ವಿಧಾನಗಳ ಮೊರೆಹೋಗುತ್ತಾರೆ.
ಉತ್ತಮ ಆರೋಗ್ಯಕ್ಕೆ ಅನೇಕ ತರಕಾರಿಗಳ ಬಳಕೆ ಮಾಡಬಹುದು..ಅವುಗಳ ಪೈಕಿ ವೆನಿಲ್ಲಾ ಬೀನ್ಸ್ ಕೂಡ ಒಂದು. ದೇಹದ ತೂಕ ಕಡಿಮೆಗೊಳಿಸುವಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ದೇಹ ಸಮಸ್ಯೆಗಳಿಗೆ ವೆನಿಲ್ಲಾ ಬೀನ್ಸ್ ಬಳಕೆ ಬಹು ಉಪಕಾರಿಯಾಗಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಇನ್ಫ್ಲಮೇಟರಿ ಗುಣ ಇರುವುದರಿಂದ ಇದು ಆರೋಗ್ಯಕಾರಿ ಅಂಶವನ್ನು ಹೊಂದಿದೆ.
ಸೂಕ್ತವಾದ ವೆನಿಲ್ಲಾ ಸಾರವನ್ನು ಬಳಸಿ ಹರ್ಬಲ್ ಟೀ ತಯಾರಿಸಿ ಸೇವಿಸುವುದು ಇಲ್ಲವೇ ನೀರಿಗೆ ವೆನಿಲ್ಲಾ ಬೀನ್ಸ್ ಹಾಕಿ ಕುದಿಸಿ ಅದರ ಡಿಕಾಕ್ಷನ್ ಸೇವನೆಯು ಅತೀ ಉತ್ತಮವಾಗಿದೆ. ಇದನ್ನು ಹಿತ ಮಿತವಾಗಿ ಬಳಸುವುದರಿಂದ ಆರೋಗ್ಯದಾಯಕ ಲಾಭಗಳನ್ನು ಪಡೆದುಕೊಳ್ಳಬಹುದು.
© 2020 Udaya News – Powered by RajasDigital.