ಸ್ಯಾಂಡಲ್‍ವುಡ್‍ನ ಕ್ಯೂಟ್ &ಸಕ್ಸಸ್ ಜೋಡಿ ಅಂದ್ರೆ ಅದು ಮಿಸ್ಟರ್ & ಮಿಸ್ಸಸ್ ರಾಮಚಾರಿ ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ – ರಾಧಿಕಾ ಪಂಡಿತ್ ಅನ್ನೋದು ಎಲ್ಲರಿಗು ಗೊತ್ತಿರೋ ವಿಚಾರ . ಇಂದು ರಾಕಿಬಾಯ್‍ಗೆ ಹುಟ್ಟು ಹಬ್ಬದ ಸಂಭ್ರಮ .ಪ್ರತಿವರ್ಷ ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ತನ್ನ ಪತಿಯ ಹುಟ್ಟುಹಬ್ಬಕ್ಕಾಗಿ ಸ್ವತ: ತಾವೇ ಮೊದಲು ವಿಶ್ ಮಾಡಿ ತನ್ನ ಕೈಯಾರೆ ಕೇಕ್ ರೆಡಿ ಮಾಡಿ ಯಶ್‍ಗೆ ಸರ್ಪೈಸ್ ಕೊಡ್ತಿದ್ರು. ಆದ್ರೆ ಈ ಬಾರಿ ರಾಧಿಕಾ ಜೊತೆ ಇನ್ನೊಬ್ರು ಕೇಕ್ ರೆಡಿ ಮಾಡಿದ್ದಾರೆ . ಅದು ಬೇರಾರು ಅಲ್ಲ ಯಶ್-ರಾಧಿಕಾ ಮುದ್ದಿನ ಮಗಳು ಐರಾ..
ಹೌದು ಈ ಬಾರಿಯ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಅಂದ್ರೆ ರಾಧಿಕಾ ಜೊತೆ ಐರಾ ನೂ ಕೇಕ್ ಮಾಡೋದ್ರಲ್ಲಿ ಬ್ಯುಶಿಯಾಗಿದ್ದಾರೆ.ಈ ವಿಡಿಯೋವನ್ನು ಸ್ವತ: ರಾಧಿಕಾ ತಮ್ಮ ಇನ್‍ಷ್ಟಾ ಗ್ರಾಮ್‍ನಲ್ಲಿ ಅಪ್‍ಲೋಡ್ ಮಾಡಿದ್ದು ಮಗಳ ಕೈಯಲ್ಲೇ ಕೇಕ್ ತಯಾರಿಸಿದ್ದಾರೆ ರಾಧಿಕ . ಜೊತೆಗೆ ಕೇಕ್ ಮಾಡೋ ಸಂದರ್ಭದಲ್ಲಿ ಮಗಳು ಐರಾ ಕೇಕ್ ಕ್ರೀಂ ತಿಂದಿದ್ದು , ಯಶ್‍ಗಾಗಿ ಸ್ವಲ್ಪ ಕೇಕ್ ಇಡ್ತೀನಿ ಅಂತ ಹೇಳಿದ್ದಾರೆ ರಾಧಿಕಾ . ಈ ವಿಡಿಯೋ ಈಗ ವೈರಲಾಗತಿದ್ದು , ಪುಟಾಣಿ ಐರಾ ಕೇಕ್ ಮೇಕಿಂಗ್ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.