ಬೆಂಗಳೂರು: ಮಳೆಗಾದಲ್ಲಿ ಬೆಂಗಳೂರಿನಲ್ಲಿ ಉಂಟಾಗಬಹುದಾದ ಪ್ರವಾಹವನ್ನು ನಿಯಂತ್ರಿಸುವ ಸಲುವಾಗಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಅಧಿಕಾರಿಗಳ ಜೊತೆ ಸೋಮವಾರ ಸುವರ್ಣಸೌಧ ಇಲಾಖೆ ಕಚೇರಿಯಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ನಗರದ ಕಾಲುವೆಗಳ ನವೀಕರಣಗೊಳಿಸುವುದು ಮತ್ತು ಕಾಲುವೆ ಸುತ್ತಲಿನ ಕಂದಾಯ ಪ್ರದೇಶದ ಲೈನಿಂಗ್ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಕಾಲುವೆಗಳ ಸುತ್ತ ರಕ್ಷಣಾ ಗೋಡೆಗಳನ್ನು ನಿರ್ಮಿಸಿ ಸೀವೇಜ್ ನೀರನ್ನು ನಗರದ ಹೊರಗೆ ಖಾಲಿ ಕೆರೆಗಳಿಗೆ ಹರಿಸುವ ಸಲುವಾಗಿಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಕೆರೆಗಳ ಅಭಿವೃದ್ಧಿ ಮತ್ತು ಬಳಕೆ ಮಾಡಬೇಕು. ನಗರದ ಯಾವ ಭಾಗದಲ್ಲಿ ನೆರೆ ಸಮಸ್ಯೆ ಇದೆಯೋ ಆ ಭಾಗದ ನೀರನ್ನು ಕೂಡಲೇ ಕೆರೆಗಳಿಗೆ ಹರಿಸುವಂತಾಗಬೇಕು. ಇದಕ್ಕೆ ಸಹಾಯವಾಗುವಂತೆ ನಗರದ ಕೆರೆಗಳು ಮತ್ತು ನೆರೆ ಪ್ರದೇಶಗಳನ್ನು ಗುರುತಿಸಬೇಕು ಎಂದು ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.