ವಿಜಯ್ ಪ್ರಸಾದ್ ನಿರ್ದೇಶನದ “ಪರಿಮಳ ಲಾಡ್ಜ್” ಚಿತ್ರ ಟೀಸರ್ ಮೂಲಕವೇ ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಟೀಸರ್ ನಲ್ಲಿ ಡಬಲ್ ಮೀನಿಂಗ್ ಡೈಲಾಗ್ಸ್ ಇದೆ ಅಂತ ಈಗಾಗ್ಲೇ ನೆಟ್ಟಿಗರು ಕಾಮೆಂಟ್ಸ್ ಮಾಡೋದಕ್ಕೆ ಶುರುಮಾಡಿಕೊಂಡಿದ್ದಾರೆ. ಈ ಮದ್ಯೆ ಹಿರಿಯ ಪತ್ರಕರ್ತ ರವಿ ಬೆಳಗೆರೆ, ಚಿತ್ರದಲ್ಲಿರುವ ಡಬಲ್ ಮೀನಿಂಗ್ ಡೈಲಾಗ್ಸ್ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ಚಿತ್ರದ ಟೀಸರ್ ಹಿಂಪಡೆದುಕೊಳ್ಳಿ. ಒಂದು ವೇಳೆ ಚಿತ್ರ ತೆಗೆಕಾಣೋದಾದರೆ ನಾನದರ ವಿರುದ್ಧ ಕೇಸ್ ಹಾಕುತ್ತೇನೆ. ನಾನೇನು ಚಿತ್ರರಂಗದ ಶತ್ರುವಲ್ಲ. ಆದರೆ ಹಿರಿಯ ನಟರನ್ನೊಳಗೊಂಡಂತಹ ಇಂತಹ ಚಿತ್ರದಲ್ಲಿ ಇರುವುದು ಡಬಲ್ ಅಲ್ಲ, ತ್ರಿಬಲ್ ಮೀನಿಂಗ್ ಡೈಲಾಗ್ಸ್..ಆದ್ದರಿಂದ ಈ ಚಿತ್ರ ತೆರಕಾಣುವದು ಸಮಾಜಕ್ಕೆ ಒಳಿತಲ್ಲ ಎಂಬುದಾಗಿ ಬೆಳಗೆರೆಯವರು ಅಭಿಪ್ರಾಯಪಟ್ಟಿದ್ದಾರೆ.