ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಹುಚ್ಚುತನ ಹುಟ್ಟುಹಾಕಿರುವ ಪಬ್‌ಜಿ ಗೇಮ್ ಆಟಗಾರರು ತಪ್ಪದೆ ಈ ಸುದ್ದಿ ಓದಲೇ ಬೇಕು..ಯಾಕಂದ್ರೆ ಗೇಮಿಂಗ್ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಆಟಗಾರರಿಗೆ 10 ವರ್ಷ ಪಬ್‌ಜಿ ಆಟದಿಂದಲೇ ನಿಷೇಧ ಹೇರುವ ಕಠಿಣ ನಿರ್ಧಾರವನ್ನು ಪಬ್‌ಜಿ’ ಗೇಮ್ ಸಂಸ್ಥೆ ‘ಟೆನ್ಸೆಂಟ್ ಗೇಮ್ಸ್’ ಕೈಗೊಂಡಿದೆ. ಪಬ್‌ಜಿ’ ಡೆವಲಪರ್ ರೂಲ್ಸ್ ಬ್ರೇಕ್ ಮಾಡಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಥವಾ ಇತರೆ ಭಿನ್ನ ಮಾರ್ಗದ ಮೂಲಕ ಗೇಮ್ ಆಡುವ ಆಟಗಾರರಿಗೆ ಬರೋಬ್ಬರಿ 10 ವರ್ಷಗಳ ಕಾಲ ನಿಷೇಧದ ಬಿಸಿ ತಟ್ಟಲಿದೆ ಎಂದು ಕಂಪೆನಿ ತಿಳಿಸಿದೆ.
ಅಲ್ಲದೆ ಪಬ್‌ಜಿ ಆಟದಲ್ಲಿ ಭಿನ್ನತೆಗಳು ಮತ್ತು ಚೀಟ್‌ಗಳನ್ನು ಬಳಸುವುದನ್ನು ನಿಷೇಧಿಸಿರುವ ಕಂಪೆನಿ, ಅಂತಹ ಆಟಗಾರರ ಖಾತೆಗಳನ್ನು ಅಥವಾ ಅವರ ಐಡಿಗಳನ್ನು ನಿಷೇಧಿಸಿದೆ. ಇನ್ನು ನಿಷೇಧಿಸಿರುವ 3,500 ಕ್ಕೂ ಹೆಚ್ಚು ಆಟಗಾರರ ಪಟ್ಟಿಯನ್ನು ಸಹ ಪಬ್‌ಜಿ ಮೊಬೈಲ್ ಬಹಿರಂಗಪಡಿಸಿದೆ. ಒಟ್ನಲ್ಲಿ ‘ಟೆನ್ಸೆಂಟ್ ಗೇಮ್ಸ್’ ಪಬ್‌ಜಿ ಗೇಮ್ ಬಗ್ಗೆ ಕೈಗೊಂಡಿರುವ ಈ ಹೊಸ ನಿರ್ಧಾರವು ಆಟಗಾರರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.