ಬೆಂಗಳೂರು: ಕರ್ನಾಟಕ ಬಂದ್ ಕರೆ ನೀಡಿದ ಕನ್ನಡಪರ ಸಂಘಟನೆ ಗಳಿಗೆ, ಬಂದ್ ಕರೆಯನ್ನು ಹಿಂಪಡೆಯಲು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತಾನಾಡಿದ ಸಚಿವರು, ಕನ್ನಡ ವಿರೋಧಿ ಪುಂಡರನ್ನು ಈಗಾಗಲೇ ಬಂಧಿಸಿದ್ದು, ಕಠಿಣಕ್ರಮ ಜರುಗಿಸಲಾಗುತ್ತಿದೆ. ಸಾಂಕ್ರಮಿಕ ಕೋವಿ ಡ್ ಕಾರಣದಿಂದ ಈಗಾಗಲೇ ಆರ್ಥಿಕವಾಗಿ ಜರ್ಝರಿತವಾಗಿ ಸಂಕಷ್ಟಕ್ಕೆ ಒಳಗಾಗಿರುವ ಮಹಾ ಜನತೆಗೆ, ಇನ್ನಷ್ಟು ಹೊರೆಯನ್ನು ಹೇರಲು ನಾವು ಕಾರಣವಾಗಬಾರದು ಎಂದವರು ಹೇಳಿದ್ದಾರೆ.
ಎಂ ಇ ಎಸ್ ಅನ್ನು ಈಗಾಗಲೇ ಬೆಳಗಾವಿ ನಗರದ ಜನತೆ ನಿಷೇಧಿಸಿದ್ದಾರೆ, ಹಾಗೂ ಸರಕಾರವು, ರಾಜ್ಯದ ಜಲ, ನೆಲ ಹಾಗೂ ನುಡಿಯ ರಕ್ಷಣೆಗೆ ಬದ್ದವಾಗಿದೆ ಎಂದು ಸಚಿವರು ಹೇಳಿದರು.