ಕೆಲ ದಿನಗಳ ಹಿಂದಷ್ಟೇ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಯಬಿಟ್ಟಿದ್ದ ಕಿರುತೆರೆಯ ಖ್ಯಾತ ನಟಿ ಶ್ವೇತಾ ಚೆಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ವೇತಾ ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
ಖುದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಶ್ವೇತಾ, “ತಾಯಿ, ತಂದೆ, ಕುಟುಂಬ ಮತ್ತು ಸ್ನೇಹಿತರ ಪ್ರೀತಿ ಮತ್ತು ಹಾರೈಕೆಯಿಂದ ನಾನು ಮತ್ತು ಕಿರಣ್ ರಾಶಿ ರಾಶಿ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗು ಆಗಿದೆ” ಎಂದಿದ್ದಾರೆ.

