ಸ್ಯಾಂಡಲ್‍ವುಡ್‍ನಲ್ಲಿ ಸದ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಮದುವೆಯದ್ದೆ ಸುದ್ದಿ.. ಇಂದು ನಟ ನಿಖಿಲ್ ಕುಮಾರ್ ಹಾಗೂ ರೇವತಿ ನಿಶ್ಚಿತಾರ್ಥ ನಡೆಯಲಿದೆ. ಬೆಂಗಳೂರಿನ ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯಲಿದೆ.ಶಾಸಕ ಎಂ. ಕೃಷ್ಣಪ್ಪರ ಸಹೋದರನ ಪುತ್ರಿ ರೇವತಿ ಜೊತೆ ಸಂಪ್ರದಾಯಕವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಇನ್ನು ಈ ಶುಭಕಾರ್ಯಕ್ರಮಕ್ಕೆ ರಾಕಜೀಯ ಪಕ್ಷದ ಮುಖಂಡರು, ಶಾಸಕರು , ಚಿತ್ರರಂಗದ ಹಲವು ಸ್ಟಾರ್ ನಟನಟಿಯರು ಹಾಗೂ ಕ್ಲೋಸ್ ಫ್ರೆಂಡ್ಸ್‍ಗಳಿಗೆ ಆಹ್ವಾನ ನೀಡಲಾಗಿದ್ದು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಇನ್ನು ಏಪ್ರಿಲ್ 17ಕ್ಕೆ ಮದುವೆಯ ದಿನಾಂಕ ನಿಗದಿಯಾಗಿದ್ದು ರಾಮನಗರದಲ್ಲಿ ಮದುವೆಯ ಸಂಭ್ರಮ ನಡೆಯಲಿದೆ..ಇಂದು ಸೀತಾರಾಮನ ಕಲ್ಯಾಣದ ಹುಡುಗನ ನಿಶ್ಚಿತಾರ್ಥಕ್ಕೆ ನಿಖಿಲ ಅಭಿಮಾನಿಗಳು ಉತ್ಸುಕರಾಗಿದ್ದಾರೆ .