ಚಿತ್ರದುರ್ಗ,ಸೆ,03; ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ಕಂಟಕದ ವಿಚಾರವಾಗಿ ಡಿಕೆಶಿ ಕಣ್ಣೀರು ಸುರಿಸಿದ್ದಾರೆ. ಈ ವಿಚಾರವಾಗಿ ಆರೋಗ್ಯ ಮಂತ್ರಿ ಬಿ.ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರದಲ್ಲಿ ನಾನು ಟೀಕೆಮಾಡಲ್ಲ. ಡಿಕೆಶಿ ಕೆಣಕಿ ಮಾತನಾಡುತ್ತಿದ್ದರು, ನಾನು ಕೆಣಕುವ ರೀತಿಯಲ್ಲಿ ಮಾತನಾಡಿದ್ದೆ. ನಾನು ಮನಸ್ಸಿನಿಂದ ಯಾವ ಮಾತು ಕೂಡಾ ಆಡಿಲ್ಲ.ನನ್ನಮಾತಿನಿಂದ ನೋವಾಗಿದ್ದರೆ, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು, ಪರ್ಸನಲ್ಆಗಿ ಅಲ್ಲ.
ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತೆ. ಅವರು ಕಷ್ಟದಲ್ಲಿದ್ದು, ಕಣ್ಣಿರು ಹಾಕುವ ವೇಳೆ ಚುಚ್ಚು ಮಾತನಾಡಿದರೆ ನೋವಾಗುತ್ತೆ. ನಾನು ಅವರ ಬಗ್ಗೆ ಯಾವುದೇ ಮಾತನಾಡಲ್ಲ, ಡಿಕೆಶಿ ಅಣ್ಣನಿಗೆ ರಾಜಕೀಯವಾಗಿ ಮಾತ್ರ ಮಾತನಾಡಿದ್ದು. ನನ್ನ ಮಾತಿಂದ ಶಿವಕುಮಾರ್ ಅವರಿಗೆ ನೋವಾಗಿದ್ರೆ, ನಾನು ಕೈ ಮುಗಿದು ಕೇಳುತ್ತೇನೆ, ಅಣ್ಣ ನನ್ನನ್ನು ಕ್ಷಮಿಸಿ ಎಂದು ರಾಮುಲು ಕ್ಷಮೆಯಾಚಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವರು ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನ ತೆಗೆದು ಇಟ್ಟಿದ್ದಾರೆ. ಮೂಲೆ ಗುಂಪು ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಕನಸು ನನಸಾಗಲ್ಲ ಎಂಬುದಾಗಿ ಶ್ರೀರಾಮುಲುರವರು ಹೇಳಿದ್ದಾರೆ.