ಬೆಂಗಳೂರು: ಜನಪರ, ರೈತ ಮತ್ತು ಶ್ರಮಿಕರ ಪರವಾದ ಯಾವುದೇ ಪ್ರತಿಭಟನೆ ಮತ್ತು ಬಂದ್ಗೆ ಜೆಡಿಎಸ್ ಬೆಂಬಲ ಸದಾ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಸೋಮವಾರದ ʼಭಾರತ್ ಬಂದ್ʼಗೆ ಜೆಡಿಎಸ್ ಬೆಂಬಲ ಇರುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು “ಜನಹಿತದಲ್ಲಿ ನಂಬಿಕೆ ಇಟ್ಟು ನಮ್ಮ ಪಕ್ಷ ಕೆಲಸ ಮಾಡುತ್ತದೆ. ಅವರ ಹಿತಕ್ಕೆ ಧಕ್ಕೆ ಎದುರಾದರೆ ಎಲ್ಲ ವೇದಿಕೆಗಳಲ್ಲೂ ದನಿ ಎತ್ತುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ” ಎಂದರು.
ಬಂದ್ ಶಾಂತಿಯುತವಾಗಿ ನಡೆಯಲಿ ಹಾಗೂ ರೈತರು, ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಸರಕಾರಗಳ ಗಮನ ಸೆಳೆಯಲಿ ಎಂದು ಎಚ್ಡಿಕೆ ಆಶಿಸಿದರು.