ಬೆಂಗಳೂರು: ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಅವರ ಆಯೋಜಿಸಿದ ಚಿಣ್ಣರ ಚಿತ್ರ ಚಿತ್ತಾರ ಮಕ್ಕಳ ರಾಜ್ಯಮಟ್ಟದ ಚಿತ್ರ ಕಲೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 5ರಂದು ಗದಗದ ಶ್ರೀ ವಿವೇಕಾನಂದ ಸಭಾಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
ಸಚಿವ ಆಚಾರ ಹಾಲಪ್ಪ ಬಸಪ್ಪ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಚಿವ ಬಿ.ಸಿ. ನಾಗೇಶ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು ಸಚಿವ ಸಿ.ಸಿ. ಪಾಟೀಲ ಅವರು ಮಕ್ಕಳ ಚಿತ್ರಕಲೆ ಪ್ರದರ್ಶನವನ್ನು ಉದ್ಘಾಟಿಸಿದರು. ಶಾಸಕ ಡಾ.ಎಚ್.ಕೆ. ಪಾಟೀಲ ಅವರು ಕಲಾವಿದರ ಪರಿಚಯ ಪ್ರದರ್ಶನವನ್ನು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷರಾದ ಕಳಕಪ್ಪ ಜಿ. ಬಂಡಿ ಅವರು ಬೃಹತ್ ಪ್ರಶಸ್ತಿ ಪತ್ರ ಮೂರ್ತಿ (ಸೆಲ್ಪಿ ಕಾರ್ನರ್ ) ಅನ್ನು ಅನಾವರಣಗೊಳಿಸಿದರು. ಶಾಸಕ, ಚಿಣ್ಣರ ಚಿತ್ರ ಚಿತ್ತಾರದ ಗೌರವಾಧ್ಯಕ್ಷರಾದ ಎಸ್.ವ್ಹಿ. ಸಂಕನೂರ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಚಿವ ಬಿ.ಸಿ. ಪಾಟೀಲ ಅವರು ಉಪಸ್ಥಿತರಿದ್ದರು..
























































